ಏಕಾಏಕಿ ಕುಸಿದ ಟೊಮೆಟೋ ಬೆಲೆ: ಟೊಮೆಟೋ ದರದಲ್ಲಿ ಭಾರೀ ಇಳಿಕೆ - Mahanayaka
12:20 AM Saturday 1 - November 2025

ಏಕಾಏಕಿ ಕುಸಿದ ಟೊಮೆಟೋ ಬೆಲೆ: ಟೊಮೆಟೋ ದರದಲ್ಲಿ ಭಾರೀ ಇಳಿಕೆ

tomato
12/08/2023

ಬೆಂಗಳೂರು:200 ರೂ. ಗಡಿ ದಾಟಿ ಗ್ರಾಹಕರ ಆತಂಕಕ್ಕೆ ಕಾರಣವಾಗಿದ್ದ ಟೊಮೆಟೋ ಬೆಲೆ ಈಗ ಏಕಾಏಕಿ ಕುಸಿದಿದೆ. ಕೆ.ಜಿ ಟೊಮೆಟೋ ಬೆಲೆ 30-40ರೂ.ಗೆ ಕುಸಿತ ಕಂಡಿದೆ

ಚಿಕ್ಕಬಳ್ಳಾಪುರ ಮಾರುಕಟ್ಟೆಯಲ್ಲಿ ಟೊಮೆಟೋ ದರ ಭಾರೀ ಇಳಿಕೆಯಾಗಿದೆ. 15 ಕೆಜಿ ಬಾಕ್ಸ್ 2,000-2,500 ರೂಪಾಯಿ ಕಂಡಿದ್ದ ಟೊಮೆಟೋ ಬೆಲೆ ಈಗ 450 ರೂಪಾಯಿಗೆ ಇಳಿದಿದೆ. ಕಳೆದ ನಾಲ್ಕೈದು ದಿನದ ಹಿಂದೆ ಟೊಮ್ಯಾಟೊ ದರ 150 ರಿಂದ 169 ರೂಪಾಯಿ ಇತ್ತು. ಒಂದು ಕ್ರೇಟ್ ಗೆ 2,000 ಇತ್ತು. ಇಂದು ಒಂದು ಕ್ರೇಟ್ ಗೆ 1,500 ರೂಪಾಯಿ ಆಗಿದೆ.

ಮಳೆ ಇದ್ದ ಕಾರಣದಿಂದ ರೈತರಿಂದ ಮಾರುಕಟ್ಟೆಗೆ ಟೊಮೆಟೋ ಸರಬರಾಜು ಆಗದ ಕಾರಣ ದರ ಜಾಸ್ತಿ ಆಗಿತ್ತು. ಮಳೆ ನಿಂತ ಕಾರಣ ಇದೀಗ ಟೊಮೆಟೋ ಸರಬರಾಜು ಆಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕೆಂಪು ಸುಂದರಿಯ ಬೆಲೆ ಕಡಿಮೆ ಆಗಿದೆ. ಬೆಲೆ ಕಡಿಮೆ ಆದ ಮೇಲೆ ಗ್ರಾಹಕರು ಬರುತ್ತಿಲ್ಲ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ.

ಇತ್ತೀಚಿನ ಸುದ್ದಿ