ಡಯಾಲೀಸಿಸ್ ಕೇಂದ್ರದ ಅವ್ಯವಸ್ಥೆ ವಿರುದ್ಧ ರೋಗಿಗಳಿಂದ ದಿಢೀರ್ ಪ್ರತಿಭಟನೆ - Mahanayaka
10:31 PM Thursday 11 - September 2025

ಡಯಾಲೀಸಿಸ್ ಕೇಂದ್ರದ ಅವ್ಯವಸ್ಥೆ ವಿರುದ್ಧ ರೋಗಿಗಳಿಂದ ದಿಢೀರ್ ಪ್ರತಿಭಟನೆ

udupi
30/05/2023

ಉಡುಪಿ ಜಿಲ್ಲಾಸ್ಪತ್ರೆಯ ಡಯಾಲೀಸಿಸ್ ಕೇಂದ್ರದ ಅವ್ಯವಸ್ಥೆಯ ವಿರುದ್ಧ ಡಯಾಲೀಸಿಸ್ ರೋಗಿಗಳು ಇಂದು ದಿಢೀರ್ ಪ್ರತಿಭಟನೆ ಮಾಡಿದರು.


Provided by

ಡಯಾಲೀಸಿಸ್ ಕೇಂದ್ರವನ್ನು ಗುತ್ತಿಗೆ ಪಡೆದಿರುವ ಎಸ್ಕಗ್ ಸಂಜೀವಿನಿ ಸಂಸ್ಥೆಯ ನಿರ್ವಹಣೆ ಕಳಪೆಯಾಗಿದ್ದು, ವ್ಯವಸ್ಥಿತವಾಗಿ ಯಾವುದೂ ನಡೆಯುತ್ತಿಲ್ಲ. ಈ ಸಂಸ್ಥೆಗೆ ಜಿಲ್ಲಾಸ್ಪತ್ರೆಯವರು ಕೇಂದ್ರವನ್ನು ಬಿಟ್ಟು ಕೊಡುವಾಗ ಒಟ್ಟು 14 ಡಯಾಲೀಸಿಸ್ ಯಂತ್ರಗಳಿದ್ದವು. ಅವುಗಳ ಪೈಕಿ ಪ್ರಸ್ತುತ ಏಳು ಯಂತ್ರಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಉಳಿದವು ಹಾಳಾಗಿದ್ದು, ಅದನ್ನು ದುರಸ್ತಿ ಕೂಡ ಮಾಡಿಲ್ಲ. ಕೇಂದ್ರದ ಅವ್ಯವಸ್ಥೆಯಿಂದ ಕಳೆದ ಒಂದು ವರ್ಷಗಳಲ್ಲಿ 30 ರೋಗಿಗಳು ಮೃತಪಟ್ಟಿದ್ದಾರೆ ಎಂದು ಧರಣಿನಿರತರು ಗಂಭೀರ ಆರೋಪ ಮಾಡಿದರು.

ಈಗ ಈ ಕೇಂದ್ರದಲ್ಲಿ ಒಟ್ಟು 60 ರೋಗಿಗಳು ಡಯಾಲೀಸಿಸ್ ಮಾಡುತ್ತಿದ್ದಾರೆ. ಈ ಎಲ್ಲ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಆಗ್ರಹಿಸಿ ರೋಗಿಗಳು ಜಿಲ್ಲಾ ಸರ್ಜನ್, ಜಿಲ್ಲಾಧಿಕಾರಿ, ಶಾಸಕರುಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಯಾಲೀಸಿಸ್ ಗೆ ಸಂಬಂಧಿಸಿ ತುಂಬಾ ಸಮಸ್ಯೆ ಇದೆ. ಸರಿಯಾಗಿ ಕ್ಲೀನ್ ಆಗುತ್ತಿಲ್ಲ. ಡಯಾಲೀಸಿಸ್ ಮಾಡಿದ ನಂತ ಚಳಿ, ವಾಂತಿ ಆಗುತ್ತದೆ. ನಾವು ಪ್ರಶ್ನೆ ಮಾಡಿದರೆ ನಮಗೆ ಉಡಾಫೆಯಿಂದ ಮಾತನಾಡುತ್ತಾರೆ. ಸಿಬ್ಬಂದಿಗಳಿಲ್ಲದೆ ಸಮಯಕ್ಕೆ ಸರಿಯಾಗಿ ಡಯಾಲೀಸ್ ಆಗುತ್ತಿಲ್ಲ. ಅವರು ಏನು ಮಾಡಿದರೂ ನಾವು ಕೇಳಬೇಕು. ಯಾಕೆಂದರೆ ನಾವು ಉಚಿತವಾಗಿ ಮಾಡುವವರು ಎಂಬ ನಿರ್ಲಕ್ಷತನ ಅವರಲ್ಲಿದೆ. ಆದುದರಿಂದ ಸರಕಾರ ಕೂಡಲೇ ಹೊಸ ಯಂತ್ರ ಅಳವಡಿಸಿ ಸರಿಯಾದ ವ್ಯವಸ್ಥೆ ಮಾಡಿಕೊಡಬೇಕು ಧರಣಿನಿರತರು ಆಗ್ರಹಿಸಿದರು.

ಉಡುಪಿ ಜಿಲ್ಲಾಸ್ಪತ್ರೆಯ ಡಯಾಲೀಸಿಸ್ ರೋಗಿಗಳ ಧರಣಿಯ ಹಿನ್ನೆಲೆಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಡಯಾಲೀಸ್ ಕೇಂದ್ರವನ್ನು ಪರಿಶೀಲನೆ ನಡೆಸಿದರು. ಬಳಿಕ ಈ ಸಂಬಂಧ ಶಾಸಕರು ಜಿಲ್ಲಾ ಸರ್ಜನ್ ಡಾ.ಸುದೇಶ್ ಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದರು. ಧರಣಿನಿರತ ರೋಗಿಗಳನ್ನು ಸಂತೈಸಿದ ಅವರು, ಇಲ್ಲಿನ ಸಮಸ್ಯೆಯನ್ನು ಕೂಡಲೇ ಬಗೆಹರಿಸುವುದಾಗಿ ಭರವಸೆ ನೀಡಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ