ಟಾನ್ಸ್ ಫಾರ್ಮ್ ರಿಪೇರಿ ವೇಳೆ ಏಕಾಏಕಿ ಬಂದ ಕರೆಂಟ್: ಲೈನ್ ಮ್ಯಾನ್ ನ ದಾರುಣ ಸಾವು

23/04/2024
ಚಿಕ್ಕಮಗಳೂರು: ಟಾನ್ಸ್ ಫಾರ್ಮ್ ರಿಪೇರಿ ಮಾಡುತ್ತಿದ್ದ ವೇಳೆ ಏಕಾಏಕಿ ವಿದ್ಯುತ್ ಹರಿದ ಪರಿಣಾಮ ಲೈನ್ ಮ್ಯಾನ್ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಸಿಗೋಡು ಗ್ರಾಮದಲ್ಲಿ ನಡೆದಿದೆ.
ಮಹದೇವ್ (30) ವಿದ್ಯುತ್ ಶಾಕ್ ನಿಂದ ಮೃತಪಟ್ಟ ಲೈನ್ ಮ್ಯಾನ್ ಆಗಿದ್ದಾರೆ. ನಾಲ್ವರು ಲೈನ್ ಮ್ಯಾನ್ ಗಳು ಹಾಗೂ ಅಧಿಕಾರಿಗಳು ಟಾನ್ಸ್ ಫಾರ್ಮ್ ರಿಪೇರಿಗೆ ತೆರಳಿದ್ದರು.
ಟಾನ್ಸ್ ಫಾರ್ಮ್ ರಿಪೇರಿ ಮಾಡುವಾಗ ಏಕಾಏಕಿ ಕರೆಂಟ್ ಬಂದಿದ್ದು, ಕೆಲಸ ಮಾಡುತ್ತಿದ್ದ ಮಹದೇವ್ ಅವರು ವಿದ್ಯುತ್ ಶಾಕ್ ಗೊಳಗಾಗಿದ್ದು, ದಾರುಣವಾಗಿ ಸಾವನ್ನಪ್ಪಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth