ಸುಧಾಕರ್ ಯಾರ ಮಾತು ಕೇಳುವುದಿಲ್ಲ: ಶಾಸಕ ಜಿ.ಸೋಮಶೇಖರ್​ ರೆಡ್ಡಿ ವಾಗ್ದಾಳಿ - Mahanayaka
7:18 AM Wednesday 10 - September 2025

ಸುಧಾಕರ್ ಯಾರ ಮಾತು ಕೇಳುವುದಿಲ್ಲ: ಶಾಸಕ ಜಿ.ಸೋಮಶೇಖರ್​ ರೆಡ್ಡಿ ವಾಗ್ದಾಳಿ

somashekhara reddy
17/09/2022

ಬಳ್ಳಾರಿ: ವಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್​ ವಿರುದ್ಧ ಶಾಸಕ ಜಿ.ಸೋಮಶೇಖರ್​ ರೆಡ್ಡಿ  ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದು, ವಿಮ್ಸ್ ಆಸ್ಪತ್ರೆ ಅವ್ಯವಸ್ಥೆ ವಿರುದ್ಧ ಇದೀಗ ಹೋರಾಟ ಬಲಗೊಳ್ಳುತ್ತಿದೆ.


Provided by

ವಿಮ್ಸ್​ ನಲ್ಲಿ ನಡೆದ ಘಟನೆಯಿಂದ ನಮಗೂ ನೋವಾಗಿದೆ. ಆಸ್ಪತ್ರೆ ನಿರ್ದೇಶಕ ಡಾ.ಗಂಗಾಧರ್ ಗೌಡರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಅವರನ್ನು ನಿರ್ದೇಶಕರನ್ನಾಗಿ ಮಾಡುವುದು ಬೇಡ ಎಂದು ಹೇಳಿದ್ದೆವು. ಸಚಿವ ಸುಧಾಕರ್ ಅವರಿಗೆ ಈ ಬಗ್ಗೆ ಮೊದಲೇ ಹೇಳಲಾಗಿತ್ತು ಎಂದಿದ್ದಾರೆ.

ಸಚಿವ ಸುಧಾಕರ್ ಯಾರ ಮಾತು ಕೇಳುವುದಿಲ್ಲ. ಆದರೆ ಸಿಎಂ ಬೊಮ್ಮಾಯಿ ನಮ್ಮ ಮಾತು ಕೇಳ್ತಿದ್ದಾರೆ. ಈ ವಿಚಾರವನ್ನ ಸಿಎಂ ಬಸವರಾಜ್ ಬೊಮ್ಮಾಯಿ ಗಮನಕ್ಕೆ ತರಲಾಗುವುದು. ಇನ್ನು ಘಟನೆ ಸಂಬಂಧ ತನಿಖೆ ನಡೆಸಲಾಗುತ್ತಿದೆ. ತನಿಖೆಯಲ್ಲಿ ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಸೂಕ್ತ ಕ್ರಮವಾಗಬೇಕು ಎಂದು ಸೋಮಶೇಖರ್ ರೆಡ್ಡಿ ಒತ್ತಾಯಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ