ಸುಳ್ಯ | ಪರವಾನಿಗೆ ಇಲ್ಲದೇ ಕೆಂಪು ಕಲ್ಲು ಸಾಗಾಟ: ಪ್ರಕರಣ ದಾಖಲು - Mahanayaka
5:53 PM Saturday 22 - November 2025

ಸುಳ್ಯ | ಪರವಾನಿಗೆ ಇಲ್ಲದೇ ಕೆಂಪು ಕಲ್ಲು ಸಾಗಾಟ: ಪ್ರಕರಣ ದಾಖಲು

polices
22/11/2025

ಮಂಗಳೂರು(ಸುಳ್ಯ):  ಕೇರಳದಿಂದ ಮಡಿಕೇರಿಗೆ ಅಕ್ರಮವಾಗಿ ಪರವಾನಿಗೆ ಇಲ್ಲದೇ ಸಾಗಿಸುತ್ತಿದ್ದ ಕೆಂಪುಕಲ್ಲನ್ನು ಸುಳ್ಯ ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಲ್ಲುಗುಂಡಿ ಹೊರಠಾಣೆಯ ಬಳಿ ಪೊಲೀಸರು  ಲಾರಿಯನ್ನು ತಡೆದು ಪರಿಶೀಲನೆ ನಡೆಸಿದ್ದು, ಈ ಸಂದರ್ಭದಲ್ಲಿ ಪರವಾನಿಗೆ ಇಲ್ಲದೇ ಕೇರಳದ ಮಿಂಚಿನಪದವು ಎಂಬಲ್ಲಿಂದ ಸುಮಾರು 400 ಕೆಂಪು ಕಲ್ಲುಗಳನ್ನು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.

ಸ್ಥಳಕ್ಕೆ ಸುಳ್ಯ ಪೊಲೀಸ್ ಠಾಣೆಯ ಎಸ್ ಐ ಸರಸ್ವತಿ ಮತ್ತು ಸಿಬ್ಬಂದಿ ಭೇಟಿ ನೀಡಿ ಲಾರಿ ಹಾಗೂ ಕೆಂಪು ಕಲ್ಲನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಲಾರಿ ಚಾಲಕ ಸೈಯದ್ ಹಾಗೂ ವಾಹನದ ಮಾಲಿಕ ಶೇಷಪ್ಪ ಪೂಜಾರಿ ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ