ಸುಳ್ಯ: ಅಜ್ಜಾವರ ಕಲ್ಲಗುಡ್ಡೆಯಲ್ಲಿ 14ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ, ಸನ್ಮಾನ ಕಾರ್ಯಕ್ರಮ - Mahanayaka
8:35 AM Wednesday 27 - August 2025

ಸುಳ್ಯ: ಅಜ್ಜಾವರ ಕಲ್ಲಗುಡ್ಡೆಯಲ್ಲಿ 14ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ, ಸನ್ಮಾನ ಕಾರ್ಯಕ್ರಮ

krishnashtami
28/08/2024


Provided by

ಸುಳ್ಯ: ಅಜ್ಜಾವರ ಕಲ್ಲಗುಡ್ಡೆ 14 ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ  ಹಾಗೂ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷರಾದ ಪ್ರಕಾಶ್ ಕಲ್ಲಗುಡ್ಡೆ ವಹಿಸಿದ್ದರು. ಉದ್ಘಾಟನೆಯನ್ನು ಸ್ಥಳೀಯ ಪುಟಾಣಿ ಮಕ್ಕಳು ನೆರವೇರಿಸಿದರು.

ಮುಖ್ಯ ಅಥಿತಿಗಳಾಗಿ ರಾಜು ಪಂಡಿತ್ ಶಾರಾದಾಂಬ ಸೇವಾ ಸಮಿತಿ ಸುಳ್ಯ, ಡಾಕ್ಟರ್ ಅವಿನಾಶ್ ಅಜ್ಜಾವರ ಸುಳ್ಯ, ಗೀತಾ ಕಲ್ಲಗುಡ್ಡೆ ಸದಸ್ಯರು ಗ್ರಾಮ ಪಂಚಾಯತ್ ಅಜ್ಜಾವರ, ದೇವಕಿ ಕಾಟಿಪಳ್ಳ ಸದಸ್ಯರು ಗ್ರಾಮ ಪಂಚಾಯತ್ ಅಜ್ಜಾವರ, ಸುರೇಶ್ ಕಾಟಿಪಳ್ಳ ಶಿಕ್ಷಕರು, ಶರಣ್ಯ ರಾವ್ ತುದಿಯಡ್ಕ ಉಪಾಧ್ಯಕ್ಷರು ವಿಷ್ಣು ಯುವಕ ಮಂಡಲ (ರಿ.) ಮೇನಾಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಂತರ ವಿವಿಧ ಆಟೋಟ ಸ್ಪರ್ಧೆಗಳು ನಡೆದವು ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ನಡೆದು ಸಂಜೆ  ಪುಟಾಣಿ ಮಕ್ಕಳಿಗೆ ಶ್ರೀ ಕೃಷ್ಣ ವೇಷ ಸ್ಪರ್ಧೆ  ನಡೆದ ಬಳಿಕ ಸಮಾರೋಪ ಸಮಾರಂಭ ಮತ್ತು ಬಹುಮಾನ ಕಾರ್ಯಕ್ರಮ ನಡೆಯಿತು.

ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಕಾಶ್ ಕಲ್ಲಗುಡ್ಡೆ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ರಂಜೀತ್ ರೈ ಮೇನಾಲ ದಕ್ಷಿಣಕನ್ನಡ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು, ರಾಜೇಶ್ ಪಣಿಕ್ಕರ್ ಇರಂತಮಜಲು ಮೇನಾಲ, ಸರೋಜೀನಿ ಕರಿಯಮೂಲೆ ಸದಸ್ಯರು ಗ್ರಾಮ ಪಂಚಾಯತ್ ಅಜ್ಜಾವರ, ಆರಕ್ಷಕ ಠಾಣೆಯ ಸಿಬ್ಬಂದಿ ನಳಿನಿ, ಚಂದ್ರಶೇಖರ ಕೆ. ಪಲ್ಲತ್ತಡ್ಕ ನಿರ್ದೇಶಕರು AVSS ಸುಳ್ಯ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ವೈದ್ಯರಾದ ಡಾಕ್ಟರ್ ಅವಿನಾಶ್ ಅಜ್ಜಾವರ ಮತ್ತು ರಾಜೇಶ್ ಪಣಿಕ್ಕರ್ ಇರಂತಮಜಲು ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಪ್ರಯುಕ್ತ ಅದೃಷ್ಟ ಚೀಟಿ ಮಾಡಲಾಗಿತ್ತು.

ಫಲಿತಾಂಶ:

ಪ್ರಥಮ ಬಹುಮಾನ: 868

ದ್ವಿತೀಯ ಬಹುಮಾನ: 834

ಹಾಗೂ ಐದು ಆಕರ್ಷಕ ಬಹುಮಾನಗಳು: 331, 994, 611, 066, 912


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ