ಸುಮಲತಾ-ರಾಕ್ ಲೈನ್ ವೆಂಕಟೇಶ್ ಫೋಟೋ ವೈರಲ್ ಬಗ್ಗೆ ಸುಮಲತಾ ಹೇಳಿದ್ದೇನು? - Mahanayaka
6:03 AM Thursday 16 - October 2025

ಸುಮಲತಾ-ರಾಕ್ ಲೈನ್ ವೆಂಕಟೇಶ್ ಫೋಟೋ ವೈರಲ್ ಬಗ್ಗೆ ಸುಮಲತಾ ಹೇಳಿದ್ದೇನು?

sumalatha rockline venkatesh
13/07/2021

ಬೆಂಗಳೂರು: ಸಂಸದೆ ಸುಮಲತಾ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ನಡುವಿನ ವಾಗ್ಯುದ್ಧದ ನಡುವೆಯೇ ಸುಮಲತಾ ಹಾಗೂ ರಾಕ್ ಲೈನ್ ವೆಂಕಟೇಶ್ ಅವರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿದೆ.


Provided by

ಈ ಪೋಟೋಗಳಿಗೆ ಸಂಬಂಧಿಸಿದಂತೆ  ಸುಮಲತಾ ಅವರು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದು, ನಾನು ನನ್ನ ಸಾರ್ವಜನಿಕ ಜೀವನದಲ್ಲಿ 40 ವರ್ಷದಿಂದ ಇದ್ದೀನಿ, ಇಂತಾ ಒಂದಲ್ಲ ಸಾವಿರಾರು, ಲಕ್ಷಾಂತರ ಫೋಟೋಸ್ ಇದೆ. ನಾವು ಸಿನಿಮಾದಲ್ಲಿ ಮಾಡಿದ ಡ್ಯಾನ್ಸ್ ಇದೆ, ಎಲ್ಲವನ್ನು ಹಾಕೋದಕ್ಕೆ ಹೇಳಿ ಎಂಟರ್ ಟೈನ್ ಮೆಂಟ್ ಆದರೂ ಸಿಗುತ್ತೆ ಎಂದು ತಿರುಗೇಟು ನೀಡಿದ್ದಾರೆ.

ಸುಮಲತಾ ಹಾಗೂ ರಾಕ್ ಲೈನ್ ವೆಂಕಟೇಶ್ ಅವರು ತೆಗೆಸಿಕೊಂಡಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುವ ಮೂಲಕ, ಜನರು ಬೇರೆ ರೀತಿಯಲ್ಲಿ ಈ ಫೋಟೋಗಳನ್ನು ಊಹಿಸುವಂತೆ ಮಾಡುವ ಪ್ರಯತ್ನ ಇದಾಗಿದೆಯೇ ಎನ್ನುವ ಅನುಮಾನಗಳ ನಡುವೆಯೇ ಸುಮಲತಾ ಹಾಗೂ ಕುಮಾರಸ್ವಾಮಿ ವಾಗ್ಯುದ್ಧ ತಾರಕಕ್ಕೇರಿದೆ.

ಸುಮಲತಾ ಅವರು ಗಣಿಗಾರಿಕೆ ವಿಚಾರವಾಗಿ ಅಪಸ್ವರ ಎತ್ತಿರುವುದೇ  ಈ ಎಲ್ಲಾ ವಿದ್ಯಮಾನಗಳೀಗೆ ಕಾರಣ ಎನ್ನಲಾಗಿದೆ. ಈ ವಾಗ್ಯುದ್ಧ ಇದೀಗ ಮಾನಹಾನಿಯವರೆಗೆ ಸಾಗಿದೆ.

ಇನ್ನಷ್ಟು ಸುದ್ದಿಗಳು:

ನಿಖಿಲ್ ರನ್ನು ಸುಮಲತಾ ಸೋಲಿಸಿದ್ದಕ್ಕೆ ಕುಮಾರಸ್ವಾಮಿ ರಾಜಕೀಯ ಮಾಡುತ್ತಿದ್ದಾರೆ | ಸಿದ್ದರಾಮಯ್ಯ

ದೊಡ್ಡಣ್ಣ ಮುಖಕ್ಕೆ ಪತ್ರ ಎಸೆದು ಅವಮಾನ, ಸುಮಲತಾ-ರಾಕ್ ಲೈನ್ ವಿಡಿಯೋ ತಿರುಚಲು ಯತ್ನ | ಕುಮಾರಸ್ವಾಮಿ ವಿರುದ್ಧ ಗಂಭೀರ ಆರೋಪ

ಕೈಕಟ್ಟಿ ನಿಲ್ಲಲು ನಾವೇನು ಗುಲಾಮರಾ ? | ಸುಮಲತಾ ವಿರುದ್ಧ ಗುಡುಗಿದ ಕುಮಾರಸ್ವಾಮಿ

 

ಇತ್ತೀಚಿನ ಸುದ್ದಿ