ಕೆಲವೇ ಕ್ಷಣಗಳಲ್ಲಿ ರಾಜಕೀಯದ ಮುಂದಿನ ನಡೆ ಕೈಗೊಳ್ಳಲಿರುವ ಸುಮಲತಾ!

ಬೆಂಗಳೂರು: ಮಂಡ್ಯದಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಮಂಡ್ಯದ ಹಾಲಿ ಸಂಸದೆ ಸುಮಲತಾ ಬೆಂಬಲಿಗರ ಸಭೆ ನಡೆಸುತ್ತಿದ್ದಾರೆ. ಕೆಲವೇ ಕ್ಷಣಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಜೆ.ಪಿ.ನಗರದ ಸುಮಲತಾ ನಿವಾಸದಲ್ಲಿ ಸಭೆ ನಡೆಯುತ್ತಿದೆ. ಸುಮಲತಾ ನಿವಾಸದಲ್ಲಿ ಬೆಂಬಲಿಗರು ಸೇರಿದ್ದು, ಸಾವಿರಾರು ಸಂಖ್ಯೆಯ ಅಂಬರೀಷ್ ಬೆಂಬಲಿಗರು ಆಗಮಿಸಿದ್ದು, ಅಂಬರೀಷ್ ಫೋಟೋ ಹಿಡಿದುಕೊಂಡು ಆಗಮಿಸಿದ್ದಾರೆ.
ಮಂಡ್ಯ ಅಂದ್ರೆ ಅಂಬರಿಷಣ್ಣ, ಅಂಬರಿಷಣ್ಣ ಅಂದ್ರೆ ಮಂಡ್ಯ, ಹಾಗಾಗಿ ಅವರು ಮಂಡ್ಯ ಬಿಟ್ಟು ಹೋಗಲ್ಲ, ಬೇರೆ ಕ್ಷೇತ್ರಗಳಲ್ಲಿ ಅವಕಾಶ ನೀಡಿದರೂ ಅವರು ಹೋಗಿಲ್ಲ ಎಂದು ಅಭಿಮಾನಿಗಳು ಹೇಳಿದ್ದು, ಸುಮಲತಾ ಯಾವುದೇ ನಿರ್ಧಾರ ಕೈಗೊಂಡರೂ ನಾವು ಅವರ ಜೊತೆಗೆ ಕೈಜೋಡಿಸುತ್ತೇವೆ ಎಂದು ಅಭಿಮಾನಿಗಳು ಮಾತನಾಡುತ್ತಾ ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth