ದೇಶದ ಅತೀ ಎತ್ತರದ ಟ್ವಿನ್ ಟವರ್ಸ್ ಕ್ಷಣ ಮಾತ್ರದಲ್ಲೇ ಉಡೀಸ್! - Mahanayaka
6:40 PM Saturday 6 - December 2025

ದೇಶದ ಅತೀ ಎತ್ತರದ ಟ್ವಿನ್ ಟವರ್ಸ್ ಕ್ಷಣ ಮಾತ್ರದಲ್ಲೇ ಉಡೀಸ್!

twin towers demolition
28/08/2022

ನವದೆಹಲಿ: ಉತ್ತರಪ್ರದೇಶದ ನೋಯ್ಡಾದಲ್ಲಿ ತಲೆ ಎತ್ತಿದ್ದ ಸೂಪರ್ ಟೆಕ್ ಅಪೆಕ್ಸ್ ಮತ್ತು ಸಿಯಾನಿ ಅವಳಿ ಬೃಹತ್ ಕಟ್ಟಡ Twin Towers ಕ್ಷಣಮಾತ್ರದಲ್ಲೇ ಧ್ವಂಸವಾಗಿ ಮಣ್ಣುಪಾಲಾಗಿದೆ.

ಇಂದು ಮಧ್ಯಾಹ್ನ 2:30ರ ವೇಳೆಗೆ ಅವಳಿ ಕಟ್ಟಡಗಳನ್ನು ನೆಲಕ್ಕುರುಳಿಸಲಾಗಿದೆ.  ಸುಪ್ರೀಂ ಕೋರ್ಟ್ ನ ಆದೇಶದಂತೆ ಸುಮಾರು 40 ಅಂತಸ್ಥಿನ ಈ ಬೃಹತ್ ಕಟ್ಟಡವನ್ನು ಯೋಗಿ ಸರ್ಕಾರ ಕೆಡವಿದೆ.

ಕಟ್ಟಡ ಧ್ವಂಸ ಮಾಡಲು 9,640 ರಂಧ್ರಗಳನ್ನು ಕೊರೆಯಲಾಗಿತ್ತು. 3,700 ಕೆ.ಜಿ. ಗನ್ ಪೌಡರ್ ಬಳಕೆ ಮಾಡಲಾಗಿತ್ತು. ವಾಟರ್ ಪಾಲ್ ಇಂಪ್ಲೋಷನ್ ತಂತ್ರಜ್ಞಾನ ಅಥವಾ ನೀರಿನ ಸ್ಫೋಟದ ಮಾದರಿಯನ್ನು ಬಳಸಿ ಕಟ್ಟಡ ಧ್ವಂಸ ಮಾಡಲಾಗಿದೆ.

ಕಟ್ಟಡ ಧ್ವಂಸ ವೇಳೆ ಭಾರೀ ಧೂಳು ಕಾಣಿಸಿಕೊಂಡಿತು, ಧೂಳು ಹರಡುವುದನ್ನು ತಪ್ಪಿಸಲು  ನೀರು ಸಿಂಪಡಣೆ ಮಾಡಲಾಯಿತು.

ಕಟ್ಟಡ ನಿಯಮ ಮೀರಿ ಕಟ್ಟಲಾಗಿದ್ದ ಈ ಬೃಹತ್ ಗೋಪುರದವನ್ನು ಧ್ವಂಸ ಮಾಡಲು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಇದೀಗ ನಿಯಮ ಮೀರಿ ನಿರ್ಮಿಸಲಾಗಿದ್ದ 40 ಅಂತಸ್ತಿನ ಎರಡು ಗೋಪುರಗಳು ನೆಲಸಮವಾಗಿವೆ. ಘಟನೆಯ ದೃಶ್ಯವನ್ನು ವೀಕ್ಷಿಸಲು ಜನರು ಸಾಕಷ್ಟು ಸಂಖ್ಯೆಯಲ್ಲಿ ಕಾಯುತ್ತಿದ್ದರು. ಕಟ್ಟಡ ಧ್ವಂಸಗೊಂಡ ವೇಳೆ ಚಪ್ಪಾಳೆ ತಟ್ಟಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ