ಅತ್ಯಾಚಾರ ಎಸಗಿ 'ಕುಜ ದೋಷ' ಎಂದು ಹೇಳಿ ಮದ್ವೆಗೆ ನಿರಾಕರಣೆ ಆರೋಪ: ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಗರಂ ಆಗಿದ್ಯಾಕೆ..? - Mahanayaka
9:48 PM Thursday 16 - October 2025

ಅತ್ಯಾಚಾರ ಎಸಗಿ ‘ಕುಜ ದೋಷ’ ಎಂದು ಹೇಳಿ ಮದ್ವೆಗೆ ನಿರಾಕರಣೆ ಆರೋಪ: ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಗರಂ ಆಗಿದ್ಯಾಕೆ..?

03/06/2023

ಅದು ಮದುವೆಯ ನೆಪದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ. ಈ ಕುರಿತು ಕೇಸ್ ದಾಖಲಾಗಿತ್ತು. ಪರಿಣಾಮ ಕೋರ್ಟ್ ನಲ್ಲಿ ವಾದ ನಡೆಯತೊಡಗಿತು. ಆರೋಪಿಯ ಜಾಮೀನಿಗಾಗಿ ವಾದ ಮಂಡಿಸಿದಾಗ ಮಹಿಳೆಗೆ ಕುಜ ದೋಷ ಇರುವ ಕಾರಣ ಆತ ಆಕೆಯನ್ನು ಮದುವೆಯಾಗಿಲ್ಲ ಎಂದು ಹೇಳಲಾಯಿತು.


Provided by

ನ್ಯಾಯಮೂರ್ತಿ ಬ್ರಿಜ್ ರಾಜ್ ಸಿಂಗ್ ಅವರ ಏಕಸದಸ್ಯ ಪೀಠವು ಮಹಿಳೆಯ ವಕೀಲರಿಗೆ ಅವರ ಕಕ್ಷಿದಾರರ ಜಾತಕವನ್ನು ಲಕ್ನೋ ವಿಶ್ವವಿದ್ಯಾಲಯದ ಜ್ಯೋತಿಷ್ಯ ವಿಭಾಗಕ್ಕೆ ಸಲ್ಲಿಸುವಂತೆ ಆದೇಶಿಸಿತ್ತು. ಅದರಂತೆ ಆಕೆಗೆ ಕುಜ ದೋಷ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಮೂರು ವಾರಗಳಲ್ಲಿ ನ್ಯಾಯಾಲಯಕ್ಕೆ ಮುಚ್ಚಿದ ಕವರ್ ವರದಿಯನ್ನು ಸಲ್ಲಿಸುವಂತೆ ಹೇಳಿತ್ತು. ಇದೀಗ ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ಶನಿವಾರ ತಡೆ ನೀಡಿದೆ.

ಹೈಕೋರ್ಟ್‌ನ ಲಕ್ನೋ ಪೀಠ ನೀಡಿದ ಆದೇಶವನ್ನು ಸ್ವಯಂಪ್ರೇರಿತವಾಗಿ ಸ್ವೀಕರಿಸಿದ ಸುಪ್ರೀಂಕೋರ್ಟ್, ಪ್ರಕರಣದಲ್ಲಿ ಜ್ಯೋತಿಷ್ಯ ಅಂಶವನ್ನು ಅನ್ವಯಿಸುವ ಪ್ರಸ್ತುತತೆಯನ್ನು ಪ್ರಶ್ನಿಸಿದೆ.

ನ್ಯಾಯಮೂರ್ತಿ ಸುಧಾಂಶು ಧುಲಿಯಾ ಮತ್ತು ನ್ಯಾಯಮೂರ್ತಿ ಪಂಕಜ್ ಮಿಥಾಲ್ ಅವರ ಪೀಠವು ಹೈಕೋರ್ಟ್ ಆದೇಶವು ಅಸಂಬದ್ಧ. ಪ್ರಕರಣದಲ್ಲಿ ಖಾಸಗಿತನದ ಹಕ್ಕನ್ನು ಉಲ್ಲಂಘಿಸಲಾಗಿದೆ ಎಂದು ಹೇಳಿದೆ.

ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ಆದೇಶ ಸರಿಯಾದುದಲ್ಲ ಅದನ್ನು ರದ್ದು ಮಾಡಬಹುದು ಎಂದು ಹೇಳಿದರು. ಪ್ರಕರಣದ ಇತರ ಅರ್ಹತೆಗಳ ಮೇಲೆ ಹೈಕೋರ್ಟ್ ಜಾಮೀನು ಪರಿಗಣಿಸಬಹುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಹಿಂದೂ ನಂಬಿಕೆಯ ಪ್ರಕಾರ, ಮಂಗಳ ಗ್ರಹ(ಕುಜ) ಪ್ರಭಾವದಡಿಯಲ್ಲಿ ಜನಿಸಿದ ವ್ಯಕ್ತಿಯು ಮಂಗಳ ದೋಷದಿಂದ (ದೋಷ)ದಿಂದ ಕೂಡಿರುತ್ತಾನೆ. ಈ ದೋಷವಿರುವ ವ್ಯಕ್ತಿಯನ್ನು ಮದುವೆಯಾದರೆ ಸಂಗಾತಿಗೆ ತೊಂದರೆ ಎಂದು ಹೇಳಲಾಗುತ್ತದೆ. ಹಿಂದೂ ವಿವಾಹಗಳಲ್ಲಿ, ಅನೇಕ ಕುಟುಂಬಗಳು ಜಾತಕ ಹೊಂದಾಣಿಕೆಯ ಮೇಲೆ ಒತ್ತು ನೀಡುತ್ತವೆ.

ಹೈಕೋರ್ಟ್‌ನ ನಿರ್ದೇಶನವು ಹಿಂದೂ ನಂಬಿಕೆ ಅವೈಜ್ಞಾನಿಕ ಮತ್ತು ಮೂಢನಂಬಿಕೆ ಎಂಬ ಕಾರಣಕ್ಕಾಗಿ ಅಲ್ಲ, ಆದರೆ ಅತ್ಯಾಚಾರ ಆರೋಪಿಯು ಸಂತ್ರಸ್ತೆಯ ಮೇಲೆ ನಡೆದಿದೆ ಎನ್ನಲಾದ ಅತ್ಯಾಚಾರದ ಆರೋಪವನ್ನು ನಿರಾಕರಿಸಲು ಇದನ್ನು ಆಧಾರವಾಗಿ ಬಳಸಲು ಮುಂದಾದ ಬಗ್ಗೆ ಸುಪ್ರೀಂ ಗರಂ ಆಗಿದೆ.

ಆರೋಪಿಯು ಮದುವೆಯ ಭರವಸೆ ನೀಡಿ ಅವಳೊಂದಿಗೆ ಲೈಂಗಿಕ ಸಂಪರ್ಕ ನಡೆಸಿದ್ದಾನೆ. ನಂತರ ಆಕೆಗೆ ಕುಜ ದೋಷವಿದೆ ಎಂದು ಮದುವೆಯಿಂದ ಹಿಂದೆ ಸರಿದಿದ್ದ ಎಂದು ಹೇಳಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ