ಸುರತ್ಕಲ್ | ಬಾರ್ ನಲ್ಲಿ ಗಲಾಟೆ: ಒಬ್ಬನಿಗೆ ಚೂರಿ ಇರಿತ - Mahanayaka

ಸುರತ್ಕಲ್ | ಬಾರ್ ನಲ್ಲಿ ಗಲಾಟೆ: ಒಬ್ಬನಿಗೆ ಚೂರಿ ಇರಿತ

police
24/10/2025

ಸುರತ್ಕಲ್:  ಬಾರ್ ವೊಂದರ ಬಳಿ ನಡೆದ ಗಲಾಟೆಯಲ್ಲಿ  ವ್ಯಕ್ತಿಯೊಬ್ಬನ ಮೇಲೆ ಚೂರಿ ಇರಿತ ನಡೆಸಿರುವ ಘಟನೆ  ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ನಡೆದಿದೆ.

ಮುಖೀದ್ ಇರಿತಕ್ಕೊಳಗಾದ ವ್ಯಕ್ತಿಯಾಗಿದ್ದು, ಮುಖೀದ್, ನಿಜಾಮ್ ಮತ್ತು ಇತರರು ಬಾರ್ ಬಳಿ ಇದ್ದ ವೇಳೆ ಸುಮಾರು ನಾಲ್ವರಿದ್ದ ತಂಡವೊಂದರ ಜೊತೆಗೆ ವಾಗ್ವಾದ ನಡೆದಿದೆ. ಒಬ್ಬ ಆರೋಪಿ ಚಾಕುವಿನಿಂದ ಮುಖೀದ್ ನ ಹೊಟ್ಟೆ ಮತ್ತು ಕಿವಿ ಬಳಿ ಇರಿದಿದ್ದಾನೆ.

ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳ ವಿರುದ್ಧ 307 ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಗಳನ್ನ ಗುರುತಿಸಿರುವುದಾಗಿ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ರೌಡಿಶೀಟರ್ ಮತ್ತು ಬಜರಂಗದಳದಲ್ಲಿ ಸಕ್ರಿಯನಾಗಿರುವ ಗುರುರಾಜ್, ಅಲೆಕ್ಸ್ ಸಂತೋಷ್, ಸುಶಾಂತ್ ಮತ್ತು ನಿತಿನ್  ಆರೋಪಿಗಳು ಎಂದು ಕಮಿಷನರ್ ತಿಳಿಸಿದ್ದಾರೆ, ಆರೋಪಿಗಳ ಬಂಧನಕ್ಕೆ ಪೊಲೀಸರು ರಾತ್ರಿಯೇ ದಾಳಿ ನಡೆಸಿದ್ದರು. ಆದ್ರೆ, ಅದಕ್ಕೂ ಮೊದಲೇ ಆರೋಪಿಗಳು ಪರಾರಿಯಾಗಿದ್ದರು. ಶೀಘ್ರವೇ ಆರೋಪಿಗಳನ್ನ ಬಂಧಿಸುವುದಾಗಿ  ಅವರು ತಿಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ