ಆದಿತ್ಯ ಉಪಗ್ರಹ ಯಶಸ್ಸಿಗೆ ಹಾರೈಸಿ ಯೋಗಪಟುಗಳಿಂದ ಸೂರ್ಯ ನಮಸ್ಕಾರ - Mahanayaka
4:41 AM Wednesday 17 - September 2025

ಆದಿತ್ಯ ಉಪಗ್ರಹ ಯಶಸ್ಸಿಗೆ ಹಾರೈಸಿ ಯೋಗಪಟುಗಳಿಂದ ಸೂರ್ಯ ನಮಸ್ಕಾರ

surya namaskar
02/09/2023

ಚಾಮರಾಜನಗರ: ಚಂದ್ರನ ಬಳಿಕ ಈಗ ಇಸ್ರೋ ಸೂರ್ಯ ಅಧ್ಯಯನ ನಡೆಸಲು ಆದಿತ್ಯ-L1 ಉಪಗ್ರಹ ಉಡಾವಣೆ ಮಾಡುತ್ತಿದ್ದು ಈ ಸಂಶೋಧನಾ ಕಾರ್ಯ ಯಶಸ್ವಿಯಾಗಲೆಂದು ಚಾಮರಾಜನಗರದಲ್ಲಿ ಯೋಗಪಟುಗಳು ಸೂರ್ಯ ನಮಸ್ಕಾರ ಮಾಡಿ ಹಾರೈಸಿದ್ದಾರೆ.


Provided by

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಚಾಮರಾಜನಗರದಲ್ಲಿ ಭಾರತಾಂಬೆ ಭಾವಚಿತ್ರ ಹಾಗೂ ಆದಿತ್ಯ ಉಪಗ್ರಹದ ಪ್ರತಿಕೃತಿಗೆ ಪುಷ್ಪಾರ್ಚನೆ ಸಲ್ಲಿಸಿ 108 ಸಾಮೂಹಿಕ ಸೂರ್ಯ ನಮಸ್ಕಾರ ಮಾಡಿ ಗಮನ ಸೆಳೆದಿದ್ದಾರೆ.

ಆದಿತ್ಯL1 ಉಪಗ್ರಹ ಯಶಸ್ವಿ ಉಡ್ಡಯನಗೊಂಡು ಸೂರ್ಯನನತ್ತ ಅಡೆತಡೆಗಳಿಲ್ಲದೇ ಪ್ರಯಾಣ ಬೆಳೆಸಿ ಸಂಶೋಧನೆಗೆ ಜಯವಾಗಲಿ ಎಂದು ಸೂರ್ಯನಿಗೆ ನಮಸ್ಕರಿಸಿದ್ದಾರೆ.

ಇತ್ತೀಚಿನ ಸುದ್ದಿ