ಹೆಬ್ರಿ: ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ - Mahanayaka

ಹೆಬ್ರಿ: ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ

swami vivekananda
16/01/2022

ಹೆಬ್ರಿ: ಪಾಂಡುರಂಗ ರಮಣ ನಾಯಕ‌ ಅಮೃತ ಭಾರತಿ ವಿದ್ಯಾಲಯ ಹೆಬ್ರಿಯಲ್ಲಿ  ಜನವರಿ 12 ರಂದು  ಸ್ವಾಮಿ ವಿವೇಕಾನಂದ ಜಯಂತಿ ‌ಆಚರಿಸಲಾಯಿತು.

ಅಮೃತ ಭಾರತಿ ವಿದ್ಯಾಲಯದ ಪ್ರಾಥಮಿಕ ಸಭಾಂಗಣದಲ್ಲಿ  ಬೆಳಗಿನ ಪ್ರಾರ್ಥನಾ ಅವಧಿಯಲ್ಲಿ  ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಮತ್ತು ಬೋಧಕ ಬೋಧಕೇತರರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಸಲಾಯಿತು.

ಈ ವೇಳೆ ಸ್ವಾಮಿ ವಿವೇಕಾನಂದರ ಭಾವಚಿತ್ರದ ಮುಂದೆ ದೀಪ ಬೆಳಗಿಸಿ , ಪುಷ್ಪಾರ್ಚನೆ ನಡೆಸಲಾಯಿತು.

ಅಮೃತ ಭಾರತಿ ವಿದ್ಯಾಲಯದ ಉಪ ಮುಖ್ಯೋಪಾಧ್ಯಾಯ, ಕನ್ನಡ ಭಾಷಾ ಶಿಕ್ಷಕರಾದ ಮಹೇಶ ಹೈಕಾಡಿ  ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಸ್ವಾಮಿ ವಿವೇಕಾನಂದರ ಬಾಲ್ಯದ ಕಥೆಯನ್ನು,  ದೀನ‌ದಲಿತರ ಬಗೆಗಿನ  ವಿವೇಕಾನಂದರ ‘ದರಿದ್ರ ದೇವೋಭವ’ ಎಂಬ ಧ್ಯೇಯ ಘೋಷಣೆಯ ಹಿಂದಿನ ಚಿಂತನೆಯನ್ನು ತಿಳಿಸಿದರು.

ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ಭಾಷಣ ಮಾಡಿ, ಇಡೀ ವಿಶ್ವವೇ ನಿಬ್ಬೆರಗಾಗುವಂತೆ  ಮಾಡಿರುವ  ಸಾಹಸಗಾಥೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಮೀನಾಕ್ಷಿ ಮಾತಾಜಿ ಪ್ರಾಥಮಿಕ ವಿಭಾಗ ಇವರು  ಕಾರ್ಯಕ್ರಮವನ್ನು  ನಿರ್ವಹಣೆ ಮಾಡಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾದ ಮಾಜಿ ಐಪಿಎಸ್ ಅಧಿಕಾರಿ

ಟೆಸ್ಟ್ ನಾಯಕತ್ವಕ್ಕೆ ವಿರಾಟ್‌ ಕೊಹ್ಲಿ ದಿಢೀರ್‌ ರಾಜೀನಾಮೆ ಬಗ್ಗೆ ಸೌರವ್ ಗಂಗೂಲಿ ಹೇಳಿದ್ದೇನು?

ಪ್ರಚೋದನಾಕಾರಿ ಭಾಷಣ: ಧಾರ್ಮಿಕ ಮುಖಂಡ ಯತಿ ನರಸಿಂಗಾನಂದ ಬಂಧನ

ಪ್ರಚೋದನಾಕಾರಿ ಭಾಷಣ: ಧಾರ್ಮಿಕ ಮುಖಂಡ ಯತಿ ನರಸಿಂಗಾನಂದ ಬಂಧನ

ಚುನಾವಣಾ ಆಯೋಗದಿಂದ ಜ. 22ರವರೆಗೆ ರೋಡ್ ಶೋ, ರ್‍ಯಾಲಿ ಮೇಲಿನ ನಿಷೇಧ ವಿಸ್ತರಣೆ

ಇತ್ತೀಚಿನ ಸುದ್ದಿ