ಸ್ವಾಮೀಜಿಗಳ ಬರ್ಥ್ ಡೇ ಪ್ರಯುಕ್ತ 150ಕ್ಕೂ ಅಧಿಕ ಗಿಡಗಳಿಗೆ ಡೆತ್ ಡೇ ಭಾಗ್ಯ! - Mahanayaka
10:29 AM Tuesday 14 - October 2025

ಸ್ವಾಮೀಜಿಗಳ ಬರ್ಥ್ ಡೇ ಪ್ರಯುಕ್ತ 150ಕ್ಕೂ ಅಧಿಕ ಗಿಡಗಳಿಗೆ ಡೆತ್ ಡೇ ಭಾಗ್ಯ!

death day
10/11/2021

ಧಾರವಾಡ: ಸ್ವಾಮೀಜಿಯ ಬರ್ಥ್ ಡೇ ಪ್ರಯುಕ್ತ ಸುಮಾರು 150ಕ್ಕೂ ಅಧಿಕ ಮರಗಳಿಗೆ ಡೆತ್ ಡೇ ಭಾಗ್ಯವನ್ನು ಕರುಣಿಸಿದ ಅಮಾನವೀಯ ಘಟನೆ ಧಾರವಾಡ ಜಿಲ್ಲೆಯ ಮನಗುಂಡಿ ಗ್ರಾಮದಲ್ಲಿ ನಡೆದಿದ್ದು, ಮರಗಳನ್ನು ಬೆಳೆಸಿದ ಸಾಧಕರಿಗೆ ಒಂದೆಡೆ ಸರ್ಕಾರ ಪ್ರಶಸ್ತಿ, ಸನ್ಮಾನ ಮಾಡುತ್ತಿದ್ದರೆ, ಇನ್ನೊಂದೆಡೆ ಸಿಎಂ ಬರುವ ಕಾರ್ಯಕ್ರಮ ಎಂದು ಮರಗಳ ಮಾರಣಹೋಮ ನಡೆಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.


Provided by

ಮನಗುಂಡಿ ಗ್ರಾಮದ ಮಾಹಾಮನಿ ಬಸವಾನಂದ ಸ್ವಾಮೀಜಿ 50ನೇ ವರ್ಷದ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ನವೆಂಬರ್ 13ರಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಹೀಗಾಗಿ ಈ ಅದ್ದೂರಿ ಕಾರ್ಯಕ್ರಮದಲ್ಲಿ ಶಾಲೆಯ ಆವರಣದಲ್ಲಿ ಬೃಹತ್ ಪೆಂಡಾಲ್ ಹಾಕಲಾಗುತ್ತಿದೆ. ಈ ವೇಳೆ ಸುಮಾರು 150ಕ್ಕೂ ಅಧಿಕ ವಿವಿಧ ಬಗೆಯ ಗಿಡಗಳನ್ನು ಗ್ರಾ.ಪಂ.ಸದಸ್ಯ ಪುಂಡಲೀಕ ಜಕ್ಕಣ್ಣ ಎಂಬಾತನ ನೇತೃತ್ವದಲ್ಲಿ ಅರಣ್ಯ ಇಲಾಖೆಗೆ ಯಾವುದೇ ಮಾಹಿತಿ ನೀಡದೇ ಕಡಿದು ಹಾಕಲಾಗಿದೆ ಎಂದು ವರದಿಯಾಗಿದೆ.

ನರೇಗಾ ಯೋಜನೆಯಡಿಯಲ್ಲಿ 4 ಲಕ್ಷ ವೆಚ್ಚದಲ್ಲಿ ಈ ಗಿಡಗಳನ್ನು ನೆಡಲಾಗಿತ್ತು ಎನ್ನಲಾಗಿದೆ. ಇದೀಗ ಸ್ವಾಮೀಜಿಗಳ ಬರ್ಥ್ ಡೇಯ ಸಂದರ್ಭದಲ್ಲಿ ಗಿಡಗಳ ಡೆತ್ ಡೇ ಆಚರಿಸುವಂತಾಗಿದೆ. ಈ ಘಟನೆಯ ವಿರುದ್ಧ ವ್ಯಾಪಕ ಆಕ್ರೋಶ ಕೇಳಿ ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ