ಸ್ವಂತ ಅಣ್ಣನಿಂದಲೇ ಸಹೋದರಿಯ ಮೇಲೆ ಅತ್ಯಾಚಾರ | ಯುವತಿಯ ನೋವು ಕೇಳದ ಪಾಲಕರು! - Mahanayaka
12:02 PM Thursday 4 - December 2025

ಸ್ವಂತ ಅಣ್ಣನಿಂದಲೇ ಸಹೋದರಿಯ ಮೇಲೆ ಅತ್ಯಾಚಾರ | ಯುವತಿಯ ನೋವು ಕೇಳದ ಪಾಲಕರು!

bhadradri
07/04/2021

ಖಮ್ಮಮ್:  ತನ್ನ ಸ್ವಂತ ಸಹೋದರಿಯ ಮೇಲೆ ಅಣ್ಣನೇ ಅತ್ಯಾಚಾರ ನಡೆಸಿರುವ ಘಟನೆ  ಭದ್ರಾದ್ರಿ ಕೊಟ್ಟಗುಡೆಮ್ ಜಿಲ್ಲೆಯ ಬಳಿ ನಡೆದಿದ್ದು, ತಂದೆಯನ್ನು ಕಳೆದುಕೊಂಡಿದ್ದ ಸಹೋದರಿ ತನ್ನ ಅಣ್ಣನ ಜೊತೆಗೆ ವಾಸವಿದ್ದಳು.

ತನ್ನ ಅಣ್ಣನೇ ತನ್ನನ್ನು ಅತ್ಯಾಚಾರ ನಡೆಸುತ್ತಿದ್ದಾನೆ ಎಂದು ಸಂತ್ರಸ್ತೆಯು ತನ್ನ ತಾಯಿಯ ಬಳಿ ಹೇಳಿದಾಗಲೂ ಅವರು ಅದನ್ನು ಗಂಭೀರವಾಗಿ ಪರಿಗಣಿಸದೇ ಇದ್ದಾಗ, ಯುವತಿಯು ತನ್ನ ಅಜ್ಜ- ಅಜ್ಜಿಯ ಬಳಿ ಹೋಗಿ ಅಳಲು ತೋಡಿಕೊಂಡಿದ್ದಾಳೆ. ಆದರೆ ಯುವತಿಗೆ ಯಾರ ಸ್ಪಂದನೆಯೂ ದೊರೆಯಲಿಲ್ಲ.

ಯುವತಿಗೆ ಬೆಂಬಲ ನೀಡುವ ಬದಲು ಪಾಲಕರು,  ಕಾಮುಕ ಸಹೋದರನಿಗೇ ಬೆಂಬಲ ನೀಡಿದ್ದಾರೆ.  ಪಾಲಕರು ಸಂತ್ರಸ್ತೆಗೆ ಯಾವುದೇ ಬೆಂಬಲ ನೀಡದೇ ಇರುವ ಸಂದರ್ಭದಲ್ಲಿ ಕೊನೆಗೆ  ಆಕೆ ಪೊಲೀಸರ ಮೊರೆ ಹೋಗಿದ್ದು, ಇದರಿಂದಾಗಿ ಪ್ರಕರಣ ಬೆಳಕಿಗೆ ಬಂದಿದೆ. ಯುವತಿಯ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇತ್ತೀಚಿನ ಸುದ್ದಿ