ಉಳ್ಳಾಲ: ಸ್ವ-ಸಹಾಯ ಒಕ್ಕೂಟಗಳ ಪದಗ್ರಹಣ, ನೂತನ ಒಕ್ಕೂಟಗಳ ಉದ್ಘಾಟನೆ, ಸಾಧನಾ ಸಮಾವೇಶ - Mahanayaka
1:50 AM Thursday 4 - September 2025

ಉಳ್ಳಾಲ: ಸ್ವ–ಸಹಾಯ ಒಕ್ಕೂಟಗಳ ಪದಗ್ರಹಣ, ನೂತನ ಒಕ್ಕೂಟಗಳ ಉದ್ಘಾಟನೆ, ಸಾಧನಾ ಸಮಾವೇಶ

ullala
12/02/2023


Provided by

ಉಳ್ಳಾಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಮಂಗಳೂರು ಪ್ರಗತಿಬಂಧು ಸ್ವ–ಸಹಾಯ ಸಂಘಗಳ ಒಕ್ಕೂಟಗಳು, ಉಳ್ಳಾಲ ವಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಒಕ್ಕೂಟಗಳ ಪದಗ್ರಹಣ ಸಮಾರಂಭ, ನೂತನ ಒಕ್ಕೂಟಗಳ ಉದ್ಘಾಟನೆ ಹಾಗೂ ಸಾಧನಾ ಸಮಾವೇಶ ಉಳ್ಳಾಲದ  ಶ್ರೀ ಶಾರದಾ ನಿಕೇತನದಲ್ಲಿ ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚಂದ್ರಹಾಸ್ ಉಳ್ಳಾಲ್, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರ ಬಗ್ಗೆ ಹಾಗೂ ಅವರ ಸಂಸ್ಥೆಯ ಬಗ್ಗೆ ಮಾತನಾಡಿ ಸಲಹೆ ಕೊಡಲು ಏನು ಇಲ್ಲ, ಭಾರತದಲ್ಲಿಯೇ ಒಂದು ವಿಶಿಷ್ಠ ರೀತಿಯಲ್ಲಿ ಹೆಸರುವಾಸಿಯಾಗಿರುವ ಹೆಗಡೆಯವರು ಅವರ ಕ್ಷೇತ್ರ,  ನಮ್ಮ  ಜಿಲ್ಲೆಯನ್ನು, ಕರ್ನಾಟಕವನ್ನು ಮುನ್ನಡೆಸಲು ಕಾರಣ ಕರ್ತರಾಗಿದ್ದಾರೆ ಎಂದರು.

ಹಣಕಾಸಿನ ವ್ಯವಸ್ಥೆಯನ್ನು ಜನಸಾಮಾನ್ಯರಿಗೆ ಒದಗಿಸುವ ದೃಷ್ಟಿಯಲ್ಲಿ ಶ್ರೀಕ್ಷೇತ್ರದ ಧರ್ಮಾಧಿಕಾರಿಗಳು  ಮಾಡಿರುವ ಈ ಸಾಧನೆ ಭಾರತ ದೇಶಕ್ಕೆ ಮಾದರಿಯಾಗಿದೆ ಎಂದರು.

ವೀರೇಂದ್ರ ಹೆಗಡೆಯವರು ಜನಸಾಮಾನ್ಯರ ಮನೆ ಬಾಗಿಲಿಗೆ ಬಂದು ಮಹಿಳೆಯರನ್ನು ಸಂಘಕ್ಕೆ ಸೇರಿಸಿಕೊಂಡು  ಅದಕ್ಕೆ ಒಬ್ಬರನ್ನು ಮುಖ್ಯಸ್ಥರನ್ನಾಗಿ ಮಾಡಿಕೊಂಡು ಸ್ವಾಲಂಬನೆಯ ಜೀವನ ಮಾಡುವಂತಹ ಆರ್ಥಿಕ ಸಹಾಯದ ವ್ಯವಸ್ಥೆಯನ್ನು ಯಾವ ರಾಷ್ಟ್ರೀಕೃತ ಬ್ಯಾಂಕ್ ಕೂಡ ಮಾಡಿಲ್ಲ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ