ಸ್ವಿಚ್ ಬೋರ್ಡ್ ಗೆ ಕೈ ಹಾಕಿದ ಮಗುವಿನ ದಾರುಣ ಸಾವು! - Mahanayaka

ಸ್ವಿಚ್ ಬೋರ್ಡ್ ಗೆ ಕೈ ಹಾಕಿದ ಮಗುವಿನ ದಾರುಣ ಸಾವು!

switch board
22/05/2022


Provided by

ಯಳಂದೂರು:  ಮಗುವೊಂದು ವಿದ್ಯುತ್ ಸ್ವಿಚ್ ಬೋರ್ಡ್ ಗೆ ಕೈ ಹಾಕಿದ ಪರಿಣಾಮ ವಿದ್ಯುತ್ ಶಾಕ್ ಹೊಡೆದು ಮಗು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಯಳಂದೂರು ತಾಲೂಕಿನ ವೈ.ಕೆ.ಮೋಳೆ ಗ್ರಾಮದಲ್ಲಿ ಭಾನುವಾರ ನಡೆದಿದೆ.

ರಂಗಸ್ವಾಮಿ- ಲಕ್ಷ್ಮಿ ದಂಪತಿಯ ಪುತ್ರ 11 ತಿಂಗಳು ವಯಸ್ಸಿನ ಗಗನ್ ಮೃತಪಟ್ಟ ಮಗು ಎಂದು ಗುರುತಿಸಲಾಗಿದೆ. ಭಾನುವಾರ ಬೆಳಗ್ಗೆ ಮಗುವನ್ನು ಸ್ನಾನ ಮಾಡಿಸಿ ಪೋಷಕರು ಮಲಗಿಸಿದ್ದರು. ಈ ವೇಳೆ ಮಗು ವಿದ್ಯುತ್ ಬೋರ್ಡ್ ಗೆ ಕೈ ಹಾಕಿದ್ದು, ಮಗುವಿಗೆ ಶಾಕ್ ಹೊಡೆದಿದೆ. ಮಗುವಿನ ಕಿರುಚಾಟ ಹೇಳಿ ಮಗುವಿನ ಚಿಕ್ಕಮ್ಮ ಬಿಡಿಸಲು ಯತ್ನಿಸಿದ್ದು, ಈ ವೇಳೆ ಅವರಿಗೂ ವಿದ್ಯುತ್ ತಗಲಿದೆ.

ತಕ್ಷಣವೇ ಇಬ್ಬರನ್ನೂ  ಚಾಮರಾಜನಗರ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆದರೆ ಮಗುವಿನ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ. ಘಟನೆ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ವರದಿಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪ್ರತಿ ಸಿಲಿಂಡರ್ ಗ್ಯಾಸಿಗೆ 200 ರೂ. ಸಬ್ಸಿಡಿ ಘೋಷಿಸಿದ್ದ ಕೇಂದ್ರ ಸರ್ಕಾರ

ತಂಪು ಪಾನೀಯದ ಮುಚ್ಚಳ ಗಂಟಲಲ್ಲಿ ಸಿಕ್ಕಿಕೊಂಡು ಪಿಯುಸಿ ವಿದ್ಯಾರ್ಥಿ ಸಾವು

ಬೈಕ್ ಗೆ ಕಾರು ಡಿಕ್ಕಿ: ಪ್ಲೈಓವರ್​​  ನಿಂದ  ಕೆಳಗೆ ಬಿದ್ದು ಸವಾರ ಸಾವು

ಕಾರಿನಲ್ಲೇ ಬೆಂಕಿ ಹಚ್ಚಿಕೊಂಡು ಯುವಕ ಯುವತಿ ಆತ್ಮಹತ್ಯೆಗೆ ಶರಣು!

ಏಕಲವ್ಯಪ್ರಶಸ್ತಿ ಪುರಸ್ಕೃತ, ಅಂತಾರಾಷ್ಟ್ರೀಯ  ಕಬಡ್ಡಿ ಆಟಗಾರ ಉದಯ ಚೌಟ ಇನ್ನಿಲ್ಲ

ಇತ್ತೀಚಿನ ಸುದ್ದಿ