ಮುಸ್ಲಿಂ ದೇಶ ತಜಕಿಸ್ತಾನದಲ್ಲಿ ಹಿಜಾಬ್ ಬ್ಯಾನ್: ದಿನದಿಂದ ದಿನಕ್ಕೆ ಭಾರೀ ಆಕ್ರೋಶ

98 ಶೇಕಡಾ ಮುಸ್ಲಿಮರಿರುವ ತಜಕಿಸ್ತಾನದಲ್ಲಿ ಸರ್ಕಾರವು ಹಿಜಾಬ್ ಗೆ ಬ್ಯಾನ್ ಮಾಡಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಹಾಗೆಯೇ ಎರಡು ಈದ್ ಗಳ ಸಂದರ್ಭದಲ್ಲಿ ಮಕ್ಕಳಿಗೆ ಕೊಡುವ ಈದಿಯನ್ನು ಕೂಡ ಸರ್ಕಾರ ಬ್ಯಾನ್ ಮಾಡಿದ್ದು ಅಲ್ಲಿನ ಮುಸ್ಲಿಮರನ್ನು ಕೆರಳಿಸಿದೆ. ಧಾರ್ಮಿಕ ಸಂಕೇತಗಳು ಸಾರ್ವಜನಿಕವಾಗಿ ಪ್ರದರ್ಶನವಾಗುವುದನ್ನು ಸರ್ಕಾರ ತಡೆಯುತ್ತಿದ್ದು ತಜಿಕಿ ಕಲ್ಚರ್ ಅನ್ನು ಪ್ರಮೋಟ್ ಮಾಡಲು ಬಯಸುತಿದೆ ಎಂದು ವರದಿಯಾಗಿದೆ.
ಪಾರ್ಲಿಮೆಂಟ್ ನ ಮೇಲ್ಮನೆಯಾದ ಮಜಿಲಿಸಿ ಮಿಲ್ಲಿಯು ಈ ಎರಡೂ ಮಸೂದೆಗಳಿಗೆ ಅಂಗೀಕಾರ ನೀಡಿದೆ. ಇದಕ್ಕೆ ಮುಸ್ಲಿಂ ಮುಖಂಡರು ಮತ್ತು ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕಾನೂನನ್ನು ಉಲ್ಲಂಘಿಸುವವರಿಗೆ ದಂಡವನ್ನು ವಿಧಿಸಲಾಗುತ್ತದೆ ಎಂದು ವರದಿಯಾಗಿದೆ. ತಜಕಿಸ್ತಾನದಲ್ಲಿ ದಟ್ಟ ಗಡ್ಡ ಬಿಡುವುದಕ್ಕೂ ನಿಷೇಧವಿದೆ. ಹಾಗೆಯೇ ವಿದ್ಯಾರ್ಥಿಗಳು ಇಸ್ಲಾಮಿ ಉಡುಪು ಮತ್ತು ಪಾಶ್ಚಾತ್ಯ ಮಿನಿಸ್ಕರ್ಟ್ ಧರಿಸುವುದಕ್ಕೆ 2007ರಿಂದ ನಿಷೇಧವಿದೆ.
ಹಾಗೆಯೇ ಈ ಬ್ಯಾನನ್ನು ಆ ಬಳಿಕ ಎಲ್ಲ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಿಗೂ ವಿಸ್ತರಿಸಲಾಗಿದೆ. ಹಾಗೆಯೇ 2018ರಲ್ಲಿ ಹೊಸ ಕಾನೂನು ಜಾರಿಗೊಳಿಸಿದ್ದು ಎಲ್ಲರೂ ತಾಜಿಕಿ ಸಂಸ್ಕೃತಿಯ ಉಡುಪು ಧರಿಸಬೇಕು ಎಂದು ಒತ್ತಾಯಿಸಲಾಗಿದೆ. ರಾಜಧಾನಿ ದುಶಾಂಬೆಯಲ್ಲಿ ಎಲ್ಲಾ ಇಸ್ಲಾಮಿಕ್ ಪುಸ್ತಕಲಾಯಗಳನ್ನು 2022 ರಲ್ಲಿ ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು.. ಬ್ಲಾಗರ್ಗಳು ಗಡ್ಡ ಬೆಳೆಸಬಾರದು ಎಂದು ಯೂತ್ ಆಂಡ್ ಸ್ಫೋರ್ಟ್ಸ್ ಕಮಿಟಿ ಯು 2023ರಲ್ಲಿ ಆದೇಶಿಸಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth