ಮಡಂಗಾವ್ ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಸ್ಕೇಟಿಂಗ್ ನಲ್ಲಿ ಬೆಳ್ಳಿಗೆದ್ದ  ತಕ್ಷನ್ ಎಂ. - Mahanayaka
1:46 AM Thursday 23 - October 2025

ಮಡಂಗಾವ್ ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಸ್ಕೇಟಿಂಗ್ ನಲ್ಲಿ ಬೆಳ್ಳಿಗೆದ್ದ  ತಕ್ಷನ್ ಎಂ.

thakshan
09/08/2023

ಮೂಡಿಗೆರೆ ಗೋವಾದ ಮಡಂಗಾವ್ ನಲ್ಲಿ ರಾಷ್ಟ್ರೀಯ ಯುವ ಕ್ರೀಡಾ ಒಕ್ಕೂಟ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಸಮರ ಕಲೆಗಳು (ನ್ಯಾಷನಲ್ ಮಾರ್ಟಿಎಲ್ ಆರ್ಟ್ಸ್) ವಿವಿಧ ಸ್ಪರ್ಧೆಗಳಲ್ಲಿ ನಗರದ ಎಚ್ ಕೆ ಎಸ್ ಅಂತಾರಾಷ್ಟ್ರೀಯ ಶಾಲೆಯ 8ನೇ ತರಗತಿ ವಿದ್ಯಾರ್ಥಿ ತಕ್ಷನ್ ಎಂ ಸ್ಕೇಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ. ವಿದ್ಯಾರ್ಥಿ ತಕ್ಷನ್ ಎಂ, ಮೂಡಿಗೆರೆ ತಾಲ್ಲೂಕಿನ ಮುಗ್ರಹಳ್ಳಿ ಸಮೀಪದ ಕಾರಮಕ್ಕಿ ಗ್ರಾಮದ ತಾರ, ಮಹೇಶ್ ದಂಪತಿಗಳ ಪುತ್ರ.

ತಕ್ಷನ್ ಸಾಧನೆಗೆ ಎಚ್ ಕೆ ಎಸ್ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಕೋಮಲಾ ಸುರೇಶ್, ಪ್ರಧಾನ ಕಾರ್ಯದರ್ಶಿ ಹೆಚ್,ಕೆ, ಸುರೇಶ್, ಕಾರ್ಯದರ್ಶಿ ಎಚ್.ಎಸ್‌.ಪ್ರಶಾಂತ್ ಗೌಡ, ಹಾಗೂ ಪ್ರಾಂಶುಪಾಲರಾದ ಡಾ.ಶಿವಕುಮಾರ್, ಆಡಳಿತ ವರ್ಗ, ಎಲ್ಲಾ ಸಮಾಲೋಚಕರು, ವಿಭಾಗದ ಮುಖ್ಯಸ್ಥರು, ಶಿಕ್ಷಕರು ಅಭಿನಂದನೆ ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ