ತಲಪಾಡಿ: ಬಸ್ ಡಿಕ್ಕಿಯಾಗಿ 6 ಮಂದಿ ಸಾವು ಪ್ರಕರಣ: ಅಪಘಾತಕ್ಕೆ ಕಾರಣ ಬಯಲು - Mahanayaka

ತಲಪಾಡಿ: ಬಸ್ ಡಿಕ್ಕಿಯಾಗಿ 6 ಮಂದಿ ಸಾವು ಪ್ರಕರಣ: ಅಪಘಾತಕ್ಕೆ ಕಾರಣ ಬಯಲು

talapady
29/08/2025


Provided by

ಮಂಗಳೂರು: ಕೇರಳ ಕರ್ನಾಟಕ ಗಡಿ ಪ್ರದೇಶವಾದ  ತಲಪಾಡಿ ಬಳಿ  KSRTC ಬಸ್ ಡಿಕ್ಕಿಯಾಗಿ ಆಟೋದಲ್ಲಿದ್ದ 6 ಮಂದಿ ಸಾವನ್ನಪ್ಪಿರುವ ಘಟನೆಗೆ ಬಸ್ ಚಾಲಕನ ಅತೀ ವೇಗ ಮತ್ತು ಅಜಾಗರೋಕತೆಯೇ ಕಾರಣ ಎಂದು KSRTC ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು,  ಮಂಗಳೂರು ವಿಭಾಗದ ಒಂದನೇ ಘಟಕದ ಕೆಎಸ್ ಆರ್ ಟಿಸಿ ಬಸ್ ತಲಪಾಡಿ ಟೋಲ್ ಗೇಟ್ ತಲುಪುವ ವೇಳೆ ಮಧ್ಯಾಹ್ನ 1:45ಕ್ಕೆ ಬಸ್ ಚಾಲಕ ನಿಜಲಿಂಗಪ್ಪ ಚಲವಾದಿ ರಸ್ತೆಗೆ ಅಡ್ಡವಾಗಿ ಬಂದ ಆಟೋಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬ್ರೇಕ್ ಹಾಕಿದ್ದಾರೆ. ಈ ವೇಳೆ ವಾಹನ ಆಟೋಗೆ ಡಿಕ್ಕಿಯಾಗಿದೆ. ಈ ವೇಳೆ ಚಾಲಕ ಬಸ್ ನ ಸೀಟಿನಿಂದ ಇಳಿದು ಹೊರಕ್ಕೆ ಓಡಿ ಹೋಗಿದ್ದಾನೆ.

ಬಸ್ ಇಳಿಜಾರು ರಸ್ತೆಯಲ್ಲಿ ನಿಂತಿದ್ದು, ಅಲ್ಲಿಂದ ಹಿಮ್ಮುಖವಾಗಿ ಚಲಿಸಿದೆ, ಬಳಿಕ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಆಟೋ ಮತ್ತು ಬಸ್ ಗೆ ಕಾಯುತ್ತಿದ್ದ ಪ್ರಯಾಣಿಕರಿಗೆ ಡಿಕ್ಕಿ ಹೊಡೆದಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಸ್ ಚಾಲಕ ನಿಜಲಿಂಗಪ್ಪ ಚಲವಾದಿ ಕಳೆದ  14 ವರ್ಷಗಳಿಂದಲೂ ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೇ ಮಾರ್ಗದಲ್ಲಿ(ಮಂಗಳೂರು—ಕಾಸರಗೋಡು) ಕಳೆದ 3 ವರ್ಷಗಳಿಂದ ಬಸ್ ಚಲಾಯಿಸುತ್ತಿದ್ದಾರೆ. ಬಸ್ ಚಾಲಕನ ಅತಿಯಾದ ವೇಗ ಮತ್ತು ಅಜಾಗರೋಕತೆ ಈ ಅಪಘಾತಕ್ಕೆ ಕಾರಣವಾಗಿದೆ. ಗಾಯಾಳುಗಳಿಗೆ ವೈದ್ಯಕೀಯ ವೆಚ್ಚವನ್ನು ನಿಗಮ ಭರಿಸಲಿದೆ ಎಂದು ಅಕ್ರಂ ಪಾಷ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ