ತಮಿಳು ಖ್ಯಾತ ಹಾಸ್ಯ ನಟ ವಡಿವೇಲುಗೆ ಅನಾರೋಗ್ಯ: ಶೀಘ್ರ ಚೇತರಿಕೆಗೆ ಅಭಿಮಾನಿಗಳಿಂದ ಪ್ರಾರ್ಥನೆ - Mahanayaka

ತಮಿಳು ಖ್ಯಾತ ಹಾಸ್ಯ ನಟ ವಡಿವೇಲುಗೆ ಅನಾರೋಗ್ಯ: ಶೀಘ್ರ ಚೇತರಿಕೆಗೆ ಅಭಿಮಾನಿಗಳಿಂದ ಪ್ರಾರ್ಥನೆ

vadivelu
25/12/2021


Provided by

ಚೆನ್ನೈ: ಖ್ಯಾತ ಹಾಸ್ಯ ನಟ ವಡಿವೇಲು ಅವರಿಗೆ ಕೊವಿಡ್ 19 ಸೋಂಕು ತಗಲಿದ್ದು, ಒಮಿಕ್ರಾನ್ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಅವರನ್ನು ಚೆನ್ನೈನ ಪೋರೂರಿನ ಶ್ರೀರಾಮಚಂದ್ರ ವೈದ್ಯಕೀಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವಡಿವೇಲು ಅವರು ಇತ್ತೀಚೆಗೆ ಯುಕೆಗೆ ಪ್ರಯಾಣಿಸಿ ಹಿಂದಿರುಗಿದ್ದರು. ಹೀಗಾಗಿ ಅವರಿಗೆ ಒಮಿಕ್ರಾನ್ ತಗಲಿರುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದೇಶಾದ್ಯಂತ ಇರುವ ವಡಿವೇಲು ಅಭಿಮಾನಿಗಳು ಇದೀಗ  ಆತಂಕದಲ್ಲಿದ್ದು, ಅವರು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

ತಮಿಳು ಚಿತ್ರರಂಗದಲ್ಲಿ ಹಾಸ್ಯನಟರಾಗಿ ಮಿಂಚಿದ್ದ ವಡಿವೇಲು ಅವರು, ಈಗಲೂ ಅವರ ಪಾತ್ರಗಳ ಮೂಲಕ ಕೇವಲ ತಮಿಳುನಾಡು ಮಾತ್ರವಲ್ಲದೇ ದಕ್ಷಿಣ ಭಾರತದಾದ್ಯಂತ ಭಾರೀ ಅಭಿಮಾನಿಗಳನ್ನು ಹೊಂದಿದ್ದಾರೆ.  ಕೆಲವು ವರ್ಷಗಳ ಹಿಂದೆ ನಟನೆಯಿಂದ ದೂರ ಉಳಿದಿದ್ದ ಅವರು, ವಿಜಯ್ ನಟನೆಯ ಮಾರ್ಸೆಲ್ ಚಿತ್ರದ ಮೂಲಕ ಮತ್ತೆ ರೀ ಎಂಟ್ರಿ ಕೊಟ್ಟಿದ್ದರು.

ಇದೀಗ ‘ನಾಯಿ ಶೇಖರ್ ರಿಟರ್ನ್ಸ್’ ಎಂಬ ಹಾಸ್ಯ ಚಿತ್ರದ ಮೂಲಕ ವಡಿವೇಲು ಮತ್ತೆ ತೆರೆಗೆ ಬರಲು ಸಜ್ಜಾಗಿದ್ದಾರೆ. ಈ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಕ್ಕಾಗಿ ವಡಿವೇಲು ಲಂಡನ್ ಗೆ ಹೋಗಿದ್ದರು. ಅಲ್ಲಿಂದ ಹಿಂದಿರುಗಿದ ಬಳಿಕ ವಡಿವೇಲುಗೆ ಕೊವಿಡ್ 19 ತಗುಲಿದ್ದು, ಒಮಿಕ್ರಾನ್ ಭೀತಿಯ ಹಿನ್ನೆಲೆಯಲ್ಲಿ ಇದೀಗ ವಡಿವೇಲು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕ್ರಿಸ್ಮಸ್ ಸಂದೇಶ: ಎಲ್ಲರ ಹೃದಯದಲ್ಲಿ ಶಾಂತಿ ಬೆಳಗಲಿ | ಸಿಸ್ಟರ್ ದೀಪ್ತಿ

ಕ್ರಿಸ್ಮಸ್ ಸಂದೇಶ: ಪ್ರೀತಿಯಿಂದ ಜೀವಿಸಿದಾಗ ನಮ್ಮ ಹೃದಯ ಗೋದಲಿಯಲ್ಲಿ ಯೇಸು ಜನಿಸುತ್ತಾರೆ | ಫಾ.ಮಾಥ್ಯೂ ವೆಲ್ಲಚಾಲಿಲ್

ಉತ್ತರ ಪ್ರದೇಶಕ್ಕೆ ರಾಷ್ಟ್ರಪತಿ ಆಳ್ವಿಕೆ ಬಂದರೂ ಅಚ್ಚರಿಯಿಲ್ಲ: ಸುಬ್ರಮಣಿಯನ್‌ ಸ್ವಾಮಿ

ಬಾಂಗ್ಲಾದೇಶ: ಚಲಿಸುತ್ತಿದ್ದ ಹಡಗಿನಲ್ಲಿ ಬೆಂಕಿ; 32 ಮಂದಿ ಸಾವು

ಕೆಎಸ್ಸಾರ್ಟಿಸಿ ಖಾಸಗೀಕರಣ ಮಾಡುವ ಪ್ರಸ್ತಾಪವಿಲ್ಲ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ನೇಣು ಬಿಗಿದು ಅತಿಥಿ ಉಪನ್ಯಾಸಕ ಆತ್ಮಹತ್ಯೆ

ಇತ್ತೀಚಿನ ಸುದ್ದಿ