ಆಳ ಸಮುದ್ರದಲ್ಲಿ ತಮಿಳುನಾಡು ಮೀನುಗಾರರ ಅಟ್ಟಹಾಸ: ಕರಾವಳಿಯ 10 ಬೋಟ್ ಗಳ ಮೇಲೆ ದಾಳಿ - Mahanayaka
12:49 AM Thursday 30 - October 2025

ಆಳ ಸಮುದ್ರದಲ್ಲಿ ತಮಿಳುನಾಡು ಮೀನುಗಾರರ ಅಟ್ಟಹಾಸ: ಕರಾವಳಿಯ 10 ಬೋಟ್ ಗಳ ಮೇಲೆ ದಾಳಿ

tamilnadu fishmans
15/02/2023

ಮಂಗಳೂರು ಸಹಿತ ರಾಜ್ಯ ಇತರ ಕಡಲ ತೀರದಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರ ಮೇಲೆ ತಮಿಳುನಾಡು ಮೀನುಗಾರರು ಆಳಸಮುದ್ರದಲ್ಲಿ ಆಕ್ರಮಣ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದರಿಂದ 10 ಕ್ಕೂ ಕರಾವಳಿಯ ಬೋಟುಗಳು ಹಾನಿಗೊಳಗಾಗಿವೆ.

ಆಳಸಮುದ್ರಕ್ಕೆ ಸ್ಮಾಲ್‌ ರಿಬ್ಬನ್‌ ಫಿಶ್‌ ಅಂದರೆ ಪಾಂಬೋಲ್‌ ಮೀನು ಹಿಡಿಯಲು ತೆರಳಿದ್ದ ಮಂಗಳೂರು ಮತ್ತು ಉಡುಪಿ ಭಾಗದ ಸುಮಾರು 300 ಬೋಟುಗಳಿಗೆ ಸಮುದ್ರದ ಮಧ್ಯದಲ್ಲೇ ತಡೆಯೊಡ್ಡಲಾಗಿದೆ.

ಬೋಟುಗಳನ್ನು ಹಿಂಬಾಲಿಸಿಕೊಂಡು ಬರುವ ತಮಿಳುನಾಡಿನ ಮೀನುಗಾರರು, ಕರ್ನಾಟಕದ ಬೋಟುಗಳ ಮೇಲೆ ಕಲ್ಲು, ದೊಣ್ಣೆಗಳನ್ನು ಎಸೆದು ಗಾಜುಗಳನ್ನು ಪುಡಿಗಟ್ಟಿದ್ದಾರೆ.

10ಕ್ಕೂ ಅಧಿಕ ಬೋಟುಗಳಿಗೆ ಹಾನಿಯಾಗಿದೆ. ಈ ನಡುವೆ ಇನ್ನು ಕೆಲವು ಬೋಟುಗಳು ದಾಳಿಯಿಂದ ತಪ್ಪಿಸಿಕೊಂಡು ಮಂಗಳೂರಿಗೆ ಬಂದಿವೆ.

ಮಂಗಳೂರಿನಿಂದ ಸುಮಾರು 200 ಮತ್ತು ಮಲ್ಪೆ, ಉಡುಪಿ ಭಾಗದ ಸುಮಾರು 100 ಬೋಟುಗಳು ಆಳಸಮುದ್ರಕ್ಕೆ ತೆರಳಿ ಮೀನುಗಾರಿಕೆಯನ್ನು ಮಾಡುತ್ತಿದ್ದು, ಈ ನಡುವೆ ತಮಿಳುನಾಡಿನ ಮೀನುಗಾರರು ದಾಳಿ ನಡೆಸಲು ಆರಂಭಿಸಿದ್ದಾರೆ.

ಇವರ ದಾಳಿಯಿಂದ ಸುಮಾರು 1,500ಕ್ಕೂ ಅಧಿಕ ಮಂದಿ ಮೀನುಗಾರಾರರು ಮೀನುಗಾರಿಕೆ ನಡೆಸಲಾಗದೇ ಮರಳಿ ಬಂದಿದ್ದಾರೆ. ಪ್ರತೀ ಬೋಟಿಗೂ 10 ಲಕ್ಷ ರೂಪಾಯಿಗೂ ಅಧಿಕ ಹಾನಿ ಉಂಟಾಗಿದೆ. ತೀರದಿಂದ 12 ನಾಟಿಕಲ್ ಮೈಲಿನ ಅನಂತರ ಆಳಸಮುದ್ರ ಮೀನುಗಾರಿಕೆಯಲ್ಲಿ ಯಾರೂ ಕೂಡಾ ಮೀನುಗಾರಿಕೆ ಮಾಡಬಹುದಾಗಿದೆ. ಅದಕ್ಕೆ ರಾಜ್ಯದ ವ್ಯಾಪ್ತಿ ಇರುವುದಿಲ್ಲ. ಆದರೆ ತಮಿಳುನಾಡಿನ ಮೀನುಗಾರರು ಪ್ರಚೋದಿತರಾಗಿ ಆಕ್ರಮಣ ನಡೆಸಿದ್ದಾರೆ. ತಮಿಳುನಾಡಿನ ಮೀನುಗಾರರ ಅಕ್ರಮಣ, ದಾಳಿ ಮೀನುಗಾರರ ನಡುವಿನ ಸಂಘರ್ಷ, ಅಂತಾರಾಜ್ಯ ವಿವಾದಕ್ಕೆ ಕಾರಣ ಮಾಡಿಕೊಟ್ಟಿದೆ. ಜಿಲ್ಲಾದಿಕಾರಿ, ಸರಕಾರ ಕೂಡಲೇ ಮಧ್ಯೆ ಪ್ರವೇಶಿಸಿ ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮೀನುಗಾರ ಮುಖಂಡರು ಆಗ್ರಹಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ