ಕರೂರು ಕಾಲ್ತುಳಿತ: ನನ್ನನ್ನು ಟಾರ್ಗೆಟ್ ಮಾಡಿ, ಮುಗ್ಧ ಜನರನ್ನಲ್ಲ: ಡಿಎಂಕೆ ಸರ್ಕಾರಕ್ಕೆ ವಿಜಯ್ ಎಚ್ಚರಿಕೆ - Mahanayaka

ಕರೂರು ಕಾಲ್ತುಳಿತ: ನನ್ನನ್ನು ಟಾರ್ಗೆಟ್ ಮಾಡಿ, ಮುಗ್ಧ ಜನರನ್ನಲ್ಲ: ಡಿಎಂಕೆ ಸರ್ಕಾರಕ್ಕೆ ವಿಜಯ್ ಎಚ್ಚರಿಕೆ

tvk vijay
30/09/2025

ಬೆಂಗಳೂರು:  ತಮಿಳುನಾಡಿನ ಕರೂರಿನಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿಕೆ ಪಕ್ಷದ ನಾಯಕ ವಿಜಯ್ ಪ್ರತಿಕ್ರಿಯೆ ನೀಡಿದ್ದು, ಈ ಸಂಬಂಧ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ.

ಇಂತಹ ದುರಂತವನ್ನು ನಾನು ನನ್ನ ಜೀವನದಲ್ಲಿ ಎಂದಿಗೂ ಎದುರಿಸಿಲ್ಲ, ಘಟನೆಯಿಂದ ನಾನು ತುಂಬಾನೇ ದುಃಖದಲ್ಲಿದ್ದೇನೆ. ಜನರು ನನ್ನ ಮೇಲಿನ ಅಭಿಮಾನದಿಂದ ಅಲ್ಲಿಗೆ ನೋಡಲು ಬಂದಿದ್ದರು. ಆದರೆ ನಡೆಯಬಾರದ್ದು ನಡೆದು ಹೋಗಿದೆ, ಸಂತ್ರಸ್ತರ ಜೊತೆಗೆ ನಾನಿದ್ದೇನೆ ಎಂದು ಭಾವುಕರಾಗಿದ್ದಾರೆ.

ಜನರ ಸುರಕ್ಷತೆ ನನ್ನ ಮೊದಲ ಆಯ್ಕೆಯಾಗಿತ್ತು. ಅವರ ಸುರಕ್ಷತೆ ಗಮನದಲ್ಲಿಟ್ಟುಕೊಂಡೇ ಸಮಾವೇಶಗಳನ್ನು ಆಯೋಜಿಸುತ್ತಾ ಬಂದಿದ್ದೇವೆ. ಅದಕ್ಕಾಗಿ ಪೊಲೀಸರೊಂದಿಗೂ ನಿರಂತರ ಸಂಪರ್ಕದಲ್ಲಿರುತ್ತೇವೆ. ಆದರೆ ಕರೂರಿನಲ್ಲಿ ನಿರೀಕ್ಷೆ ಮೀರಿ ಜನಸಂದಣಿ ಉಂಟಾಯಿತು. ನಾನು ಅಲ್ಲಿಗೆ ಹೋಗಿದ್ದರೆ ಇನ್ನೂ ದೊಡ್ಡ ಅನಾಹುತ ಆಗುತ್ತಿತ್ತು ಎಂದು ಅವರು ಹೇಳಿದರು.

ಕಾಲ್ತುಳಿತ ದುರಂತಕ್ಕೆ  ಕಾರಣ ಏನು ಎನ್ನುವುದು ಶೀಘ್ರವೇ ಗೊತ್ತಾಗಲಿದೆ. ಸತ್ಯ ಖಂಡಿತಾ ಹೊರ ಬರಲಿದೆ. ‘ನನ್ನನ್ನು ಟಾರ್ಗೆಟ್ ಮಾಡಿ, ಆದರೆ ಮುಗ್ಧ ಜನರನ್ನಲ್ಲ ಎಂದು ಅವರು ಡಿಎಂಕೆ ಸರ್ಕಾರಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ