ಮದುವೆ ಸಂಭ್ರಮದಲ್ಲೂ ದರ್ಶನ್ ಅವರನ್ನು ನೆನಪಿಸಿಕೊಂಡ ತರುಣ್—ಸೋನಲ್

ಹೊಸ ಜೀವನ ಶುರು ಮಾಡ್ತಿದ್ದೀವಿ ತುಂಬಾ ಖುಷಿ ಇದೆ. ದರ್ಶನ್ ಸರ್ ನಮ್ ಜೀವನದಲ್ಲಿ ಇಂಪಾರ್ಟೆಂಟ್ ರೋಲ್ ಪ್ಲೇ ಮಾಡಿದ್ದಾರೆ. ಅವರನ್ನು ಯಾವತ್ತೂ ಮರೆಯಲ್ಲ ಎಂದು ಸೋನಲ್ ಮೊಂಥೆರೋ ಹೇಳಿದ್ದಾರೆ.
ಇಂದು ನಿರ್ದೇಶಕ ತರುಣ್ ಸುಧೀರ್ ಜೊತೆಗೆ ಸಪ್ತಪದಿ ತುಳಿದ ನಂತರ ಮಾಧ್ಯಮಗಳ ಜೊತೆಗೆ ಅವರು ಮಾತನಾಡಿದರು.
ನನ್ನ ಹುಟ್ಟು ಹಬ್ಬದ ದಿನದಂದೇ ನಾನು ಹೊಸ ಜೀವನಕ್ಕೆ ಕಾಲಿಡ್ತಾ ಇರೋದು ಅತ್ಯಂತ ಸಂಭ್ರಮ ತಂದಿದೆ ಎಂದು ಅವರು ಹೇಳಿದರು.
ತರುಣ್ ಸುದೀರ್ ಮಾತನಾಡಿ, ಲಗ್ನ ಪತ್ರಿಕೆ ಬರೆಸುವ ಮುಂಚೆ ಡೇಟ್ ಕನ್ಪರ್ಮ್ ಆಗಿತ್ತು. ಡೇಟ್ ಚೇಂಜ್ ಮಾಡ್ಬೇಡ ಮದ್ವೆ ಮಾಡ್ಕೊ ಅಂದ್ರು ದರ್ಶನ್. ಆಗಸ್ಟ್ 11 ಡೇಟ್ ಕೊಟ್ಟಿದ್ವಿ. ಅವರು ಹೇಳಿದಂತೆ ಮದುವೆ ಆಗ್ತಿದ್ದೇವೆ. ದರ್ಶನ್ ಅವ್ರ ಅನುಪಸ್ಥಿತಿ ಬೇಸರ ಅನ್ನಿಸ್ತಿದೆ ಎಂದು ತರುಣ್ ಸುಧೀರ್ ಭಾವುಕರಾದರು.
ಮದುವೆ ಸಂಭ್ರಮದಲ್ಲಿಯೂ ತರುಣ್ ಸೋನಲ್ ಜೋಡಿ ನಟ ದರ್ಶನ್ ಅವರನ್ನು ತುಂಬಾನೇ ಮಿಸ್ ಮಾಡಿಕೊಂಡರು. ದರ್ಶನ್ ಅನುಪಸ್ಥಿತಿಯ ಬಗ್ಗೆ ಇಬ್ಬರೂ ಬೇಸರ ವ್ಯಕ್ತಪಡಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth