ಕ್ರಿಶ್ಚಿಯನ್ ಸಂಪ್ರದಾಯದಂತೆ ತರುಣ್ ಸುಧೀರ್- ಸೋನಲ್ ಮೊಂಥೆರೋ ವಿವಾಹ - Mahanayaka

ಕ್ರಿಶ್ಚಿಯನ್ ಸಂಪ್ರದಾಯದಂತೆ ತರುಣ್ ಸುಧೀರ್– ಸೋನಲ್ ಮೊಂಥೆರೋ ವಿವಾಹ

sonal tharun
02/09/2024

ಮಂಗಳೂರು: ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮೊಂಥೆರೋ ಮಂಗಳೂರಿನಲ್ಲಿ ಇಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾದರು.

ಕ್ರಿಶ್ಚಿಯನ್ ಸಂಪ್ರದಾಯದಂತೆ ತರುಣ್ ಸುಧೀರ್ ಹಾಗೂ ಸೋನಲ್‌ ಉಂಗುರ ಬದಲಿಸಿಕೊಂಡರು. ಸೋನಲ್‌ ಅವರು ಬಿಳಿ ಬಣ್ಣದ ಲಾಂಗ್​ ಗೌನ್​ ನಲ್ಲಿ ಗಮನಸೆಳೆದರು. ತರುಣ್ ಸುಧೀರ್ ವೈಟ್​ ಸೂಟ್​ ನಲ್ಲಿ ಕಾಣಿಸಿಕೊಂಡಿದ್ದಾರೆ.

ಚರ್ಚ್​ ವೆಡ್ಡಿಂಗ್ ಬಳಿಕ ಈ​ ಜೋಡಿ ಮಂಗಳೂರಿನಲ್ಲಿ ಅದ್ಧೂರಿ ರೆಸೆಪ್ಷನ್‌ ಸಹ ಮಾಡಿಕೊಂಡಿದೆ.

ಆಗಸ್ಟ್​ 11ರಂದು ಬೆಂಗಳೂರಿನ ಪೂರ್ಣಿಮಾ ಪ್ಯಾಲೆಸ್‌ ನಲ್ಲಿ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮೊಂಥೆರೋ ಮದುವೆ ಹಿಂದೂ ಸಂಪ್ರದಾಯದಂತೆ ಅದ್ದೂರಿಯಾಗಿ ನಡೆದಿತ್ತು. ಸೋನಲ್ ಅವರು ಕ್ರಿಶ್ಚಿಯನ್ ಸಮುದಾಯದವರಾಗಿರುವ ಹಿನ್ನೆಲೆ ಎರಡೂ ಸಂಪ್ರದಾಯದ ಪ್ರಕಾರವಾಗಿ ವಿವಾಹ ನೆರವೇರಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ