ಟಾಟಾ ಏಸ್ ವಾಹನ ಪಲ್ಟಿ: ದೇವಸ್ಥಾನಕ್ಕೆ ತೆರಳುತ್ತಿದ್ದ 15 ಪ್ರಯಾಣಿಕರಿಗೆ ಗಾಯ - Mahanayaka
8:24 AM Monday 15 - September 2025

ಟಾಟಾ ಏಸ್ ವಾಹನ ಪಲ್ಟಿ: ದೇವಸ್ಥಾನಕ್ಕೆ ತೆರಳುತ್ತಿದ್ದ 15 ಪ್ರಯಾಣಿಕರಿಗೆ ಗಾಯ

vijayapura
07/12/2023

ವಿಜಯಪುರ: ಟಾಟಾ ಏಸ್ ವಾಹನ ಮಗುಚಿ ಬಿದ್ದ ಪರಿಣಾಮ 15ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಲೋಯಲಾ ಶಾಲೆ ಬಳಿಯಲ್ಲಿ ನಡೆದಿದೆ.


Provided by

ಬೇವಿನಾಳ ಗ್ರಾಮದಿಂದ ಅಫಜಲಪೂರ ತಾಲೂಕಿನ ಘತ್ತರಗಿ ದೇಗುಲಕ್ಕೆ ಜವಳ ಕಾರ್ಯಕ್ರಮಕ್ಕೆ ಸಾರ್ವಜನಿಕರು ಟಾಟಾ ಏಸ್ ವಾಹನದಲ್ಲಿ ತೆರಳುತ್ತಿದ್ದರು. ಲೋಯಲಾ ಶಾಲೆಯ ಬಳಿ ತಲುಪುವ ವೇಳೆ ಚಾಲಕನ ನಿಯಂತ್ರಣ ಕಳೆದುಕೊಂಡು ವಾಹನ ಮಗುಚಿಬಿದ್ದಿದೆ.

ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ 15 ಜನರಿಗೆ ಅಪಘಾತದಿಂದ ಗಾಯಗಳಾಗಿವೆ. ಗಾಯಾಳುಗಳನ್ನು ಸಿಂದಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಿಂದಗಿ ಪೊಲೀಸರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇತ್ತೀಚಿನ ಸುದ್ದಿ