ತೌಕ್ತೆ ಚಂಡಮಾರುತ ಅಬ್ಬರಕ್ಕೆ ಕುಸಿದು ಬಿದ್ದ ಎರಡು ಅಂತಸ್ತಿನ ಮನೆ - Mahanayaka

ತೌಕ್ತೆ ಚಂಡಮಾರುತ ಅಬ್ಬರಕ್ಕೆ ಕುಸಿದು ಬಿದ್ದ ಎರಡು ಅಂತಸ್ತಿನ ಮನೆ

tauktae cyclone kasaragod
15/05/2021

ಕಾಸರಗೋಡು:  ತೌಕ್ತೆ ಚಂಡಮಾರುತದ ಪರಿಣಾಮ ಕೇರಳದಲ್ಲಿ ಕಳೆದ ರಾತ್ರಿ ಸುರಿಯಲು ಆರಂಭಿಸಿದ ಭಾರೀ ಮಳೆ ಮುಂದುವರಿದಿದೆ. ಇನ್ನೊಂದೆಡೆ ಸಮುದ್ರದಿಂದ ತೀರ ಪ್ರದೇಶಕ್ಕೆ ಬೃಹತ್ ಅಲೆಗಳು ಅಪ್ಪಳಿಸುತ್ತಿದ್ದು, ಸಾರ್ವಜನಿಕರು ಆತಂಕದಲ್ಲಿದ್ದಾರೆ.


Provided by

ಕಾಸರಗೋಡು ತೀರ ಪ್ರದೇಶವೊಂದರಲ್ಲಿದ್ದ ಎರಡು ಅಂತಸ್ತಿನ ಕಟ್ಟಡಕ್ಕೆ ಬೃಹತ್ ಅಲೆಗಳು ಅಪ್ಪಳಿಸಿದ್ದು,  ಅಲೆಗಳ ವೇಗಕ್ಕೆ ಕಟ್ಟಡ ಕುಸಿದು ಬಿದ್ದಿದೆ.  ಕೇರಳ ಸರ್ಕಾರ ನೀಡಿದ್ದ ಮುನ್ಸೂಚನೆಯಂತೆ ಮೊದಲೇ ಕಟ್ಟಡದಲ್ಲಿದ್ದವರನ್ನು  ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದರಿಂದಾಗಿ ಭಾರೀ ಪ್ರಾಣಾಪಾಯದಿಂದ ಕಟ್ಟಡದಲ್ಲಿದ್ದವರು ಪಾರಾಗಿದ್ದಾರೆ.

ಕೇರಳ, ಕರ್ನಾಟಕ, ಲಕ್ಷದ್ವೀಪ, ಗೋವಾ ಮತ್ತು ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳ ಮೇಲೆ ತೌಕ್ತೆ ಚಂಡಮಾರುತದ  ಪರಿಣಾಮ ಬೀರಿದ್ದು,  ಮೇ 17ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಐಎಂಡಿ ಎಚ್ಚರಿಕೆ ನೀಡಿದೆ.

ಇತ್ತೀಚಿನ ಸುದ್ದಿ