ಅಪ್ರಾಪ್ತ ಬಾಲಕಿಯನ್ನು ರಹಸ್ಯವಾಗಿ ವಿವಾಹವಾದ ಶಿಕ್ಷಕ ಅಮಾನತು!

22/08/2023
ಬೀದರ್: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ರಹಸ್ಯವಾಗಿ ವಿವಾಹ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಿ ಶಾಲಾ ಶಿಕ್ಷಕನೋರ್ವನನ್ನು ಅಮಾನತು ಮಾಡಿ ಆದೇಶಿಸಲಾಗಿದೆ.
ಆರೋಪ ಎದುರಿಸುತ್ತಿರೋ ಶಿಕ್ಷಕ ಸಂದೀಪ್ ಕುಮಾರ್ ಅಜೂರೆ ವಿರುದ್ಧ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಾದ ಬೆನ್ನಲ್ಲೇ ಡಿಡಿಸಿಪಿ ಸಲೀಂ ಪಾಷಾ ಅವರು ಶಿಕ್ಷಕನನ್ನು ಅಮಾನತುಗೊಳಿಸಿ ಆದೇಶ ನೀಡಿದ್ದಾರೆ.
ಆರೋಪಿ ಶಿಕ್ಷಕ ಸಂದೀಪ್ ಗೆ ಈಗಾಗಲೇ ಮದುವೆಯಾಗಿ ಮಗುವಿದ್ದರೂ ಕೂಡ ಹಲಸಿ ತೂಗಾಂವ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಮದುವೆಯಾಗಿದ್ದ.
ಈ ಬಗ್ಗೆ ಶಿಶು ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ ಬಾಳುವಾಲೆ ಶಿಕ್ಷಕನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನ ಹಲಸಿ ತೂಗಾಂವ್ ಗ್ರಾಮದ 15 ವರ್ಷದ ಬಾಲಕಿಯನ್ನು ಆರೋಪಿ ಶಿಕ್ಷಕ ರಹಸ್ಯವಾಗಿ ವಿವಾಹವಾಗಿದ್ದು, ಇದೀಗ ಕಾನೂನಿನ ಸವಾಲು ಎದುರಿಸುತ್ತಿದ್ದಾನೆ.