ವಿದ್ಯಾರ್ಥಿನಿಯ ಕೈ ಮುರಿಯುವಂತೆ ಥಳಿಸಿದ್ದ ಶಿಕ್ಷಕಿ ಅಮಾನತು - Mahanayaka

ವಿದ್ಯಾರ್ಥಿನಿಯ ಕೈ ಮುರಿಯುವಂತೆ ಥಳಿಸಿದ್ದ ಶಿಕ್ಷಕಿ ಅಮಾನತು

kolara
20/09/2023


Provided by

ಕೋಲಾರ: ಶಾಲಾ ವಿದ್ಯಾರ್ಥಿನಿಗೆ ಥಳಿಸಿ ಕೈಮುರಿದ ಆರೋಪದಲ್ಲಿ ಕೆಜಿಎಫ್ ತಾಲ್ಲೂಕಿನ ಅಲ್ಲಿಕಲ್ಲಿ ಗ್ರಾಮದ ಸರ್ಕಾರಿ ಹಿರಿಯ ಶಾಲೆಯ ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದೆ.

ಶಿಕ್ಷಕಿ ಹೇಮಲತಾ ಅವರನ್ನು ಕೋಲಾರ ಡಿಡಿಪಿಐ ಕೃಷ್ಣಮೂರ್ತಿ ಅಮಾನತುಗೊಳಿಸಿ ಆದೇಶಿಸಿದ್ದು, ಬಾಲಕಿಯ ಚಿಕಿತ್ಸಾ ವೆಚ್ಚವನ್ನು ಕೂಡ ಭರಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಕಳೆದ ವಾರ ಭವ್ಯ ಶ್ರೀ ಎಂಬ ವಿದ್ಯಾರ್ಥಿನಿಗೆ ಮುಖ್ಯ ಶಿಕ್ಷಕಿ ಹೇಮಲತಾ ಥಳಿಸಿದ್ದರು . ಇದರ ಪರಿಣಾಮ ವಿದ್ಯಾರ್ಥಿನಿಯ ಎಡಗೈ ಮುರಿತಕ್ಕೊಳಗಾಗಿತ್ತು. ಈ ಸಂಬಂಧ ಪೋಷಕರು ಶಿಕ್ಷಕಿ ವಿರುದ್ಧ ಕೆಜಿಎಫ್ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದು, ಶಿಕ್ಷಕಿಯನ್ನು ಅಮಾನತುಗೊಳಿಸಲು ಪಟ್ಟು ಹಿಡಿದಿದ್ದರು. ಇದೀಗ ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದೆ.

ಇತ್ತೀಚಿನ ಸುದ್ದಿ