ಸಾವಿರಾರು ಎಕರೆ ಭೂಮಿಯನ್ನ ಅಕ್ರಮವಾಗಿ ಮಂಜೂರು ಮಾಡಿದ್ದ ತಹಶೀಲ್ದಾರ್ ಅರೆಸ್ಟ್ - Mahanayaka

ಸಾವಿರಾರು ಎಕರೆ ಭೂಮಿಯನ್ನ ಅಕ್ರಮವಾಗಿ ಮಂಜೂರು ಮಾಡಿದ್ದ ತಹಶೀಲ್ದಾರ್ ಅರೆಸ್ಟ್

arest
25/08/2023


Provided by

ಚಿಕ್ಕಮಗಳೂರು: ಸಾವಿರಾರು ಎಕರೆ ಭೂಮಿಯನ್ನ ಅಕ್ರಮವಾಗಿ ಮಂಜೂರು ಮಾಡಿದ್ದ ಆರೋಪ ಎದುರಿಸುತ್ತಿರುವ ಕಡೂರಿನ ಹಿಂದಿನ ತಹಶೀಲ್ದಾರ್ ಉಮೇಶ್ ರನ್ನು ಬಂಧಿಸಲಾಗಿದೆ.

ಮೀಸಲು ಅರಣ್ಯವನ್ನು 8 ಜನರಿಗೆ ಪರಭಾರೆ ಮಾಡಿದ್ದ ತಹಶೀಲ್ದಾರ್ ಉಮೇಶ್ ಸೇರಿ ಮೂವರ ವಿರುದ್ಧ ಕಡೂರು ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.

ಇಂದು ಬೆಂಗಳೂರಿನಲ್ಲಿ ಉಮೇಶ್ ಅವರನ್ನು ಕಡೂರು ಪೊಲೀಸರು ಬಂಧಿಸಿದ್ದಾರೆ. ಕಡೂರಿನಲ್ಲಿ 3500 ಎಕರೆ ಭೂಮಿಯನ್ನ ಅಕ್ರಮವಾಗಿ ಮಂಜೂರು ಮಾಡಿದ್ದ ಉಮೇಶ್ ಪ್ರಮೋಷನ್ ಆಗಿ ಕಾರವಾರ ಸೀಬರ್ಡ್ ನೌಕನೆಲೆಯಲ್ಲಿ ಭೂಸ್ವಾಧೀನ ಅಧಿಕಾರಿಯಾಗಿದ್ದರು. ಈ ಪ್ರಕರಣದ ತನಿಖೆಗೆ 15 ತಹಶೀಲ್ದಾರ್ ಗಳ ತಂಡವನ್ನ ರಚಿಸಲಾಗಿತ್ತು.

 

 

ಇತ್ತೀಚಿನ ಸುದ್ದಿ