ವಿಂಡೋ ಸೀಟೇ ಬೇಡ ಸರ್ ನಂಗೆ : ಮುದ್ದು ಕುಮಾರನ ಪಂಚಿಂಗ್ ವಿಡಿಯೋಗೆ ನೆಟ್ಟಿಗರ ಮೆಚ್ಚುಗೆ

ಸದಾ ವಿಭಿನ್ನ ವಿಡಿಯೋಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುವ ಮುದ್ದು ಕುಮಾರ ಅವರು ಇದೀಗ ಎಮರ್ಜೆನ್ಸಿ ಎಕ್ಸಿಟ್ ಬಗ್ಗೆ ಮಾಡಿರುವ ವಿಡಿಯೋ ಸಕತ್ ವೈರಲ್ ಆಗಿದೆ.
ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು, ವಿಮಾನದ ಎಮರ್ಜೆನ್ಸಿ ಎಕ್ಸಿಟ್ ತೆರೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ರೀತಿಯ ಟ್ರೋಲ್ ಗಳು ಕಾಣಿಸಿಕೊಂಡಿವೆ. ಈ ಪೈಕಿ ಮುದ್ದು ಕುಮಾರ ಅವರು ಮಾಡಿರುವ ವಿಡಿಯೋ ಗಮನ ಸೆಳೆದಿದೆ.
ಅವರು ತಮ್ಮ Vickypedia The Gagster ಎಂಬ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದು, ನೈಜ ಘಟನೆ ಆಧಾರಿತ – ಕಾಲ್ಪನಿಕ ವಿಡಿಯೋ ಎಂಬ ಟೈಟಲ್ ಮೂಲಕ, ವಿಭಿನ್ನವಾದ ಸ್ಕ್ರಿಪ್ಟ್ ನೊಂದಿಗೆ ಘಟನೆಯನ್ನು ವ್ಯಂಗ್ಯ ಮಾಡಿದ್ದಾರೆ.
ಮುದ್ದು ಕುಮಾರ್ ಅವರು ತಾನೇ ತೇಜಸ್ವಿ ಸೂರ್ಯನಂತೆ ನಟಿಸಿದ್ದು, ಅಧಿಕಾರಿಗಳು ಕರೆ ಮಾಡುವ ವೇಳೆ ಹೀಗೆ ಉತ್ತರಿಸುತ್ತಾರೆ:
ಸರ್, ನಾನು ಎಮರ್ಜೆನ್ಸಿ ಅಂತ ಬರೆದಿತ್ತಾ, ನಾನು ಯಾವುದೋ ಮೂಡ್ ನಲ್ಲಿದ್ದೆ 1975ದ್ದು ಅಂದ್ಕೊಂಡ್ ಬಿಟ್ಟೆ, ನೆಕ್ಟ್ಸ್ ಟೈಮ್ ನಿಂದ ಹೀಗೆ ಆಗಲ್ಲ, ಸೀಟೇ ಬೇಡ ನನ್ಗೆ, ಸೀಟ್ ಬೇಡ ಅಂದ್ರೆ, ವಿಂಡೋ ಸೀಟ್ ನನಗೆ ಬೇಡ, ಮಧ್ಯ ಕೂತ್ಕೋತಿನಿ ಎಂದು ಹೇಳಿದ್ದಾರೆ.
ವಿಡಿಯೋ ನೋಡಿ:
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw