ಬಾವಿಗೆ ಹಾರಿ ಟೆಂಪೋ ಚಾಲಕ ಸಾವಿಗೆ ಶರಣು

27/09/2023
ದಕ್ಷಿಣ ಕನ್ನಡ: ಟೆಂಪೋ ಚಾಲಕರೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ತೊಕ್ಕೊಟ್ಟು ಒಳಪೇಟೆಯ ಸಂತ ಸೆಬಾಸ್ಟಿಯನ್ ಚರ್ಚ್ ಬಳಿ ನಡೆದಿದೆ.
ತೊಕ್ಕೊಟ್ಟು ಕೃಷ್ಣ ನಗರ ಲಚ್ಚಿಲ್ ನಿವಾಸಿ ನಾಗೇಶ್ (62), ಮೃತರು. ಇವರು ಗೂಡ್ಸ್ ಆಟೋ ಟೆಂಪೊ ಚಲಾಯಿಸುತ್ತಿದ್ದ ಇವರು ದಿನನಿತ್ಯ ಟೆಂಪೋವನ್ನು ತೊಕ್ಕೊಟ್ಟು ಒಳಪೇಟೆಯ ಚರ್ಚ್ ಮುಂಭಾಗದಲ್ಲಿರೋ ಮನೆಯಂಗಳದಲ್ಲೇ ನಿಲ್ಲಿಸುತ್ತಿದ್ದರು. ಇಂದು ಬೆಳಗ್ಗೆ ನಾಗೇಶ್ ಟೆಂಪೋ ತೆಗೆಯದೆ ನಾಪತ್ತೆಯಾಗಿದ್ದರು.
ಮನೆಯಂಗಳದಲ್ಲೇ ನಿಲ್ಲಿಸಲಾಗಿದ್ದ ಟೆಂಪೋದೊಳಗೆ ನಾಗೇಶ್ ಅವರ ಮೊಬೈಲ್, ನಗದು, ಚಪ್ಪಲಿ ಪತ್ತೆಯಾಗಿತ್ತು. ಅನುಮಾನಗೊಂಡು ಮನೆಮಂದಿ, ಸ್ಥಳೀಯರು ಬಾವಿಯಲ್ಲಿ ಹುಡುಕಾಟ ನಡೆಸಿದಾಗ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.