ತೆಂಗಿನ ಮರಕ್ಕೆ ಬಡಿದ ಸಿಡಿಲು, ಪಕ್ಕದ ಮನೆಗೂ ಅಪ್ಪಳಿಸಿತು | ಬಳಿಕ ನಡೆದದ್ದೇನು ಗೊತ್ತಾ?
19/04/2021
ಉಳ್ಳಾಲ: ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ತೊಕ್ಕೊಟ್ಟು ಕೆರೆಬೈಲ್ ನ ಮನೆಯೊಂದಕ್ಕೆ ಸಿಡಿಲು ಬಡಿದು ಹಾನಿಯಾಗಿದ್ದು, ತೆಂಗಿನ ಮರದಲ್ಲಿ ಬೆಂಕಿ ಹತ್ತಿಕೊಂಡು ಸುಟ್ಟು ಹೋಗಿರುವ ಭೀಕರ ದೃಶ್ಯ ಕಂಡು ಬಂದಿದೆ.
ತೆಂಗಿನ ಮರಕ್ಕೆ ಅಪ್ಪಳಿಸಿದ ಸಿಡಿಲು ಬಳಿಕ ಇಲ್ಲಿನ ರಾಜ ಕಾಮತ್ ಎಂಬವರ ಮನೆಯ ಕೋಣೆಗೆ ಅಪ್ಪಳಿಸಿದೆ. ಸಿಡಿಲು ಬಡಿದ ವೇಳೆ ಮನೆಯಲ್ಲಿ ರಾಜ ಕಾಮತ್ ಹಾಗೂ ಅವರ ಪತ್ನಿ, ಅಕ್ಕ, ಮಗಳು ಮನೆಯ ಹಾಲ್ ನಲ್ಲಿದ್ದರು. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯಿಂದಾಗಿ ಮನೆಯ ವಿದ್ಯುತ್ ಉಪಕರಣಗಳು ಹಾನಿಯಾಗಿವೆ ಎಂದು ತಿಳಿದು ಬಂದಿದೆ. ಸ್ಥಳೀಯ ನಗರಸಭಾ ಸದಸ್ಯರಾದ ರಾಜೇಶ್ ಯು.ಬಿ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




























