ಪಾಕಿಸ್ತಾನ ಪ್ರಧಾನಿ ನಿವಾಸದ ಬಳಿಯೇ ಭೀಕರ ಸ್ಫೋಟ: ಬಂಕರ್ ನಲ್ಲಿ ಅಡಗಿದ ಪಾಕ್ ಪ್ರಧಾನಿ!? - Mahanayaka

ಪಾಕಿಸ್ತಾನ ಪ್ರಧಾನಿ ನಿವಾಸದ ಬಳಿಯೇ ಭೀಕರ ಸ್ಫೋಟ: ಬಂಕರ್ ನಲ್ಲಿ ಅಡಗಿದ ಪಾಕ್ ಪ್ರಧಾನಿ!?

Shehbaz Sharif
09/05/2025


Provided by

ಇಸ್ಲಾಮಾಬಾದ್: ಪಹಲ್ಗಾಮ್ ಉಗ್ರರ ದಾಳಿಗೆ ಭಾರತ ನೀಡಿದ ಪ್ರತ್ಯುತ್ತರಕ್ಕೆ ಪಾಕಿಸ್ತಾನ ಗಡಗಡ ನಡುಗಿದೆ. ನಿನ್ನೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ನಿವಾಸದ ಸಮೀಪದಲ್ಲೇ ಭೀಕರ ಸ್ಫೋಟ ಸಂಭವಿಸಿದ್ದು, ಪಾಕ್ ಪ್ರಧಾನಿ ದಾಳಿಯಿಂದ ತಪ್ಪಿಸಿಕೊಳ್ಳಲು ಬಂಕರ್ ನಲ್ಲಿ ಅಡಗಿ ಕುಳಿತಿರುವುದಾಗಿ ವರದಿಯಾಗಿದೆ.

ಇಸ್ಲಾಮಾಬಾದ್ ನಲ್ಲಿ ಶೆಹಬಾಜ್ ಶರೀಫ್ ನಿವಾಸವಿದೆ. ಅವರ ಮನೆಯಿಂದ ಕೇವಲ 20 ಕಿ.ಮೀ. ದೂರದಲ್ಲೇ ಭಾರೀ ಸ್ಫೋಟವಾಗಿದ್ದು, ಪಾಕ್ ಪ್ರಧಾನಿ ಬೆಚ್ಚಿಬಿದ್ದಿದ್ದಾರೆ.
ಪಾಕಿಸ್ತಾನದ ಹಲವು ನಗರಗಳು ಕತ್ತಲಲ್ಲಿವೆ. ದಾಳಿಯ ಭೀತಿಯಿಂದ ಕೆಲವು ನಗರಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.

ನಾಗರಿಕರು ರಸ್ತೆಗೆ ಬಾರದಂತೆ ಪಾಕಿಸ್ತಾನ ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಿದೆ. ಇದರ ನಡುವೆಯೇ ಭಾರತದ ಮೇಲೆ ದಾಳಿ ನಡೆಸಲು ಯತ್ನಿಸಿದ ಯುದ್ಧ ವಿಮಾನವನ್ನು ಹೊಡೆದುರುಳಿಸಿರುವ ಭಾರತೀಯ ಸೇನೆ ಪಾಕಿಸ್ತಾನ ಮೂಲದ ಪೈಲಟ್ ನನ್ನು ವಶಕ್ಕೆ ಪಡೆದುಕೊಂಡಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ