ತಬ್ಲಿಘ್ ಜಮಾತ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 17 ಜನರು ಆರೋಪ ಮುಕ್ತ - Mahanayaka

ತಬ್ಲಿಘ್ ಜಮಾತ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 17 ಜನರು ಆರೋಪ ಮುಕ್ತ

19/02/2021


Provided by

ಲಕ್ನೋ: ತಬ್ಲಿಘ್ ಜಮಾತ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 7 ವಿದೇಶಿಯರು ಸೇರಿದಂತೆ 17 ಜನರನ್ನು ಇಲ್ಲಿನ ನ್ಯಾಯಾಲಯವೊಂದು ನ್ಯಾಯಾಲಯವು ಆರೋಪ ಮುಕ್ತಗೊಳಿಸಿದ್ದು,  ಇವರ ವಿರುದ್ಧದ ಆರೋಪಕ್ಕೆ ಯಾವುದೇ ಸಾಕ್ಷಿಗಳಿಲ್ಲ ಎಂದ ಸಿಜೆಎಂ ನ್ಯಾಯಾಲಯ ತಿಳಿಸಿದೆ ಆರೋಪ ಮುಕ್ತಗೊಳಿಸಿದೆ.

ಆರೋಪಮುಕ್ತಗೊಂಡ 17 ಜನರಲ್ಲಿ ಏಳು ಜನರು ಇಂಡೋನೇಷ್ಯಾ ಪ್ರಜೆಗಳಾಗಿದ್ದಾರೆ. ಉಳಿದವರು ಭಾರತೀಯರಾಗಿದ್ದಾರೆ. ಇವರ ಮೇಲೆ ಹೊರಿಸಲಾಗಿರುವ ಆರೋಪಕ್ಕೆ ಯಾವುದೇ ಸಾಕ್ಷಿಗಳಿಲ್ಲದ ಹಿನ್ನೆಲೆಯಲ್ಲಿ ನ್ಯಾಯಾಲಯವು ಆರೋಪ ಮುಕ್ತಗೊಳಿಸಿದೆ.

2020ರ ಜನವರಿ 20ರಂದು ಅಧಿಕೃತ ವೀಸಾ ಮತ್ತು ಪಾಸ್‌ಪೋರ್ಟ್‌ನೊಂದಿಗೆ ಭಾರತಕ್ಕೆ ಬಂದಿದ್ದಾಗಿ ಇಂಡೋನೇಷ್ಯಾದ ಪ್ರಜೆಗಳು ವಿಚಾರಣೆ ವೇಳೆ ನ್ಯಾಯಾಲಯಕ್ಕೆ ತಿಳಿಸಿದ್ದರು. ಅಲ್ಲದೇ ಇಂಡೋನೇಷ್ಯಾದಲ್ಲಿ ಕೋವಿಡ್‌-19 ಪ್ರಕರಣ ಮೊದಲಿಗೆ ಪತ್ತೆಯಾಗಿದ್ದು 2020ರ ಮಾರ್ಚ್‌ 2ಕ್ಕೆ ಎಂಬುದನ್ನೂ ನ್ಯಾಯಾಲಯದ ಗಮನಕ್ಕೆ ತಂದಿದ್ದರು.

 

ಇತ್ತೀಚಿನ ಸುದ್ದಿ