ತಾಯಿಯ ಮೇಲೆ ಜೀಪ್ ಹರಿಸಿ ಭೀಕರವಾಗಿ ಹತ್ಯೆ ಮಾಡಿದ ಪಾಪಿ ಪುತ್ರ - Mahanayaka

ತಾಯಿಯ ಮೇಲೆ ಜೀಪ್ ಹರಿಸಿ ಭೀಕರವಾಗಿ ಹತ್ಯೆ ಮಾಡಿದ ಪಾಪಿ ಪುತ್ರ

hemaraj
18/02/2022


Provided by

ಮೈಸೂರು: ಪುತ್ರನೋರ್ವ ಹೆತ್ತ ತಾಯಿಯ ಮೇಲೆ ಜೀಪ್ ಹರಿಸಿ ಬರ್ಬರವಾಗಿ ಹತ್ಯೆ ನಡೆಸಿದ ಭೀಕರ ಘಟನೆ ಪಿರಿಯಾಪಟ್ಟಣ ತಾಲೂಕಿನ ಸೂಳೆಕೋಟೆ ಗ್ರಾಮದಲ್ಲಿ ನಡೆದಿದೆ.

65 ವರ್ಷ ವಯಸ್ಸಿನ ನಾಗಮ್ಮ ತನ್ನ ಪುತ್ರನಿಂದಲೇ ಹತ್ಯೆಗೀಡಾದ ತಾಯಿಯಾಗಿದ್ದು, ಇವರ ಪುತ್ರ 45 ವರ್ಷ ವಯಸ್ಸಿನ ಹೇಮರಾಜ್ ಹತ್ಯೆ ಆರೋಪಿಯಾಗಿದ್ದಾನೆ.

ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ತಾಯಿ ಮಗನ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.  ನಿನ್ನೆಯೂ ತಾಯಿ ಮಗನ ನಡುವೆ ಜಗಳ ನಡೆದಿದ್ದು, ಜಗಳದ ಬಳಿಕ ತಾಯಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಪುತ್ರ ಟ್ರಾವೆಲ್ ಜೀಪ್ ನಿಂದ ತಾಯಿಗೆ ಡಿಕ್ಕಿ ಹೊಡೆಸಿ ಭೀಕರವಾಗಿ ಹತ್ಯೆ ಮಾಡಿದ್ದಾನೆ.

ಅಪಘಾತದ ತೀವ್ರತೆಗೆ ತಾಯಿ ನಾಗಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸದ್ಯ ಪ್ರಕರಣದ ಆರೋಪಿ ಹೇಮರಾಜ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಮೃತ ಮಹಿಳೆಯ ಮರಣೋತ್ತರ ಪರೀಕ್ಷೆಗೆ ಮೃತದೇಹ ರವಾನಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಚುನಾವಣೆ ಪ್ರಚಾರ ಮಾಡುತ್ತಿದ್ದ ವೇಳೆ ಅಭ್ಯರ್ಥಿ ಹೃದಯಾಘಾತದಿಂದ ಸಾವು

ಮರಕ್ಕೆ ಡಿಕ್ಕಿ ಹೊಡೆದ ಬೈಕ್: ಬೈಕ್ ಸವಾರನ ದಾರುಣ ಸಾವು

ಹಿಜಾಬ್ ಧರಿಸುತ್ತೇವೆ, ಪ್ರತ್ಯೇಕ ಕೊಠಡಿಯಲ್ಲಿ ಪಾಠ ಕೇಳಲ್ಲ | ವಿದ್ಯಾರ್ಥಿನಿಯರಿಂದ ಪಟ್ಟು

ಕೇಸರಿ ಧ್ವಜ ಹಾರಿಸುತ್ತೇನೆಂದು ಈಶ್ವರಪ್ಪ ಹೇಳಿಲ್ಲ | ಕುಮಾರಸ್ವಾಮಿ

ಹಿಜಾಬ್ , ಜನಿವಾರ, ಕುಂಕುಮ, ಲಿಂಗ, ಕ್ರಾಸ್ ಶಾಲೆಯಿಂದ ಹೊರಗಿಡಿ | ನಟ ಚೇತನ್ ಅಹಿಂಸಾ ಒತ್ತಾಯ

 

ಇತ್ತೀಚಿನ ಸುದ್ದಿ