ಬೆಂಗಳೂರಿಗೆ ದಿಢೀರ್ ಭೇಟಿ ನೀಡಿದ ತಲೈವಾ ರಜನೀಕಾಂತ್ - Mahanayaka
10:48 AM Saturday 31 - January 2026

ಬೆಂಗಳೂರಿಗೆ ದಿಢೀರ್ ಭೇಟಿ ನೀಡಿದ ತಲೈವಾ ರಜನೀಕಾಂತ್

rajinikanth
29/08/2023

ಬೆಂಗಳೂರು: ಖ್ಯಾತ ನಟ ತಲೈವಾ ರಜನಿಕಾಂತ್‌ ತಮ್ಮ ಮೂಲ ರಾಜ್ಯ, ಊರು, ಬೆಂಗಳೂರಿಗೆ ತಮ್ಮ ಕೆಲವು ಆಪ್ತರೊಂದಿಗೆ ಭೇಟಿ ನೀಡಿದರು.

ರಜನೀಕಾಂತ್ ಬೆಂಗಳೂರಿನಲ್ಲಿ ತಾವು ಚಿಕ್ಕಂದಿನಲ್ಲಿ ಓಡಾಡಿ ಆಟ ಆಡಿ ಬೆಳೆದ ಪರಿಸರದಲ್ಲಿರುವ ಸೀತಾಪತಿ ಅಗ್ರಹಾರ ಶ್ರೀ ರಾಘವೇಂದ್ರ ಮಠಕ್ಕೆ ಮಂಗಳವಾರ ಬೆಳಗ್ಗೆ ದಿಢೀರನೆ ಆಗಮಿಸಿ ರಾಯರ ದರ್ಶನ ಪಡೆದರು.

ಅಲ್ಲದೇ ಇದೇ ವೇಳೆ ಚಿತ್ರರಂಗ ಪ್ರವೇಶಿಸುವ ಮುನ್ನ ಬಿಎಂಟಿಸಿ ಸಾರಿಗೆ ಸಂಸ್ಥೆಯ ಕಂಡಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ರಜನಿಕಾಂತ್ ಸೀತಾಪತಿ ಅಗ್ರಹಾರದಲ್ಲಿ ರಾಯರ ದರ್ಶನ ಬಳಿಕ ಕೆಎಸ್ ಆರ್ಟಿಸಿ ಬಸ್ ಡಿಪೋಗೆ ಭೇಟಿ ನೀಡಿ ನೌಕರರೊಡನೆ ಸಂಭ್ರಮಿಸಿ ತಮ್ಮ‌ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ರಜನಿ ಅಭಿಮಾನಿಗಳು ಸಾರಿಗೆ‌ ನೌಕರರು ತಲೈವಾ ಜೊತೆ‌ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸಪಟ್ಟರು.

ಇತ್ತೀಚಿನ ಸುದ್ದಿ