ಕಾಲೇಜಿನ ಎದುರೇ ತಲೆ ಇಲ್ಲದ ವಿದ್ಯಾರ್ಥಿಯ ಮೃತ ದೇಹ ಪತ್ತೆ! - Mahanayaka

ಕಾಲೇಜಿನ ಎದುರೇ ತಲೆ ಇಲ್ಲದ ವಿದ್ಯಾರ್ಥಿಯ ಮೃತ ದೇಹ ಪತ್ತೆ!

28/02/2021


Provided by

ಪುಣೆ: ಸಂಶೋಧನಾ  ವಿದ್ಯಾರ್ಥಿಯೋರ್ವನ ಮೃತದೇಹ ಪತ್ತೆಯಾಗಿದ್ದು, ಆದರೆ ಮೃತದೇಹದಲ್ಲಿ ತಲೆಯೇ ಇರಲಿಲ್ಲ.  ಕಲ್ಲುಗಳಿಂದ ಜಜ್ಜಿ ಭೀಕರವಾಗಿ ವಿದ್ಯಾರ್ಥಿಯನ್ನು ಹತ್ಯೆ ಮಾಡಲಾಗಿದ್ದು, ರುಂಡವನ್ನು ಮುಂಡದಿಂದ ಬೇರ್ಪಡಿಸಲಾಗಿದೆ.

ಮಹಾರಾಷ್ಟ್ರದ ಜಲಾಲಾಬಾದ್ ಜಿಲ್ಲೆಯ ಜಬ್ರಾಬಾದ್ ಮೂಲದ 30 ವರ್ಷ ವಯಸ್ಸಿನ ಸುದರ್ಶನ್ ಮೃತಪಟ್ಟ ವಿದ್ಯಾರ್ಥಿಯಾಗಿದ್ದು, ಬೆಳಗ್ಗೆ ಸಾರ್ವಜನಿಕರು ವಾಕಿಂಗ್ ಮಾಡುತ್ತಿರುವಾಗ ಮೃತದೇಹ ಪತ್ತೆಯಾಗಿದೆ.

ತಲೆ ಇಲ್ಲದ ದೇಹವಾದುದರಿಂದ ಆರಂಭದಲ್ಲಿ ಮೃತಪಟ್ಟ ವಿದ್ಯಾರ್ಥಿಯ ಗುರುತು ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಬಳಿಕ ಧರಿಸಿದ್ದ ಬಟ್ಟೆ ಹಾಗೂ ಕಾಲೇಜಿನ ಐಡೆಂಟಿ ಕಾರ್ಡ್ ನಿಂದ ವಿದ್ಯಾರ್ಥಿಯ ಗುರುತು ಪತ್ತೆ ಮಾಡಲಾಗಿದೆ.

ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸ್ಥಳ ಪರಿಶೀಲನೆಯ ಬಳಿಕ ವಿದ್ಯಾರ್ಥಿಯ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದು, ಆರೋಪಿ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

whatsapp

ಇತ್ತೀಚಿನ ಸುದ್ದಿ