ಆನೆ ಹಾವಳಿ: ತಮ್ಮದೇ ಸಚಿವರ ವಿರುದ್ಧವೇ ಬಿಜೆಪಿ ಶಾಸಕ ಆಕ್ರೋಶ - Mahanayaka
2:51 PM Wednesday 20 - August 2025

ಆನೆ ಹಾವಳಿ: ತಮ್ಮದೇ ಸಚಿವರ ವಿರುದ್ಧವೇ ಬಿಜೆಪಿ ಶಾಸಕ ಆಕ್ರೋಶ

apachhu ranjan
17/03/2022


Provided by

ಬೆಂಗಳೂರು: ಕೊಡಗು ಜಿಲ್ಲೆಯಲ್ಲಿ ಆನೆ ಹಾವಳಿ ಹೆಚ್ಚಾಗಿದೆ. ಸರ್ಕಾರಕ್ಕೆ ನಿಯಂತ್ರಣ ಮಾಡುವುದಕ್ಕೆ ಆಗುವುದಿಲ್ಲವೇ ? ನಿಮ್ಮಿಂದ ಸಾಧ್ಯವಿಲ್ಲ ಎಂದಾದರೆ ಹೇಳಿ, ನಾವೇ ನೋಡ್ಕೊತೀವಿ ಎಂದು ತಮ್ಮದೇ ಪಕ್ಷದ ಸಚಿವರಿಗೆ, ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಸವಾಲು ಹಾಕಿದ್ದಾರೆ.

ಕಲಾಪದ ವೇಳೆ ಅವರು, ತಮ್ಮ ಪ್ರಶ್ನೆಗೆ ಉತ್ತರ ನೀಡಲು ಹದಿನೈದು ದಿನ ಸಮಯಾವಕಾಶ ಕೇಳಿದ ಕಾರಣಕ್ಕೆ ಅಪ್ಪಚ್ಚು ರಂಜನ್ ಅರಣ್ಯ ಸಚಿವ ಉಮೇಶ್ ಕತ್ತಿ ಅವರ ವಿರುದ್ಧ ಬೇಸರ ವ್ಯಕ್ತಪಡಿಸಿದರು. ಅಪ್ಪಚ್ಚು ರಂಜನ್ ಪ್ರಶ್ನೆಗೆ ಉತ್ತರ ನೀಡಲು ಸಚಿವ ಉಮೇಶ್‌ ಕತ್ತಿ ಹದಿನೈದು ದಿನ‌ ಸಮಯ ಕೇಳಿದ್ದಾರೆ. ಇದರಿಂದ ತಮ್ಮದೇ ಪಕ್ಷದ ಸಚಿವರ ಬಗ್ಗೆ ಕಲಾಪದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಚಿವರು ಉತ್ತರ ನೀಡುವುದರಿಂದ ತಪ್ಪಿಸಿಕೊಳ್ಳಲು ಈ ರೀತಿ ಸಮಯ ಕೇಳಿತ್ತಿದ್ದಾರೆ ಎಂದು ರಂಜನ್ ಆರೋಪಿಸಿದರು. ಅಲ್ಲದೆ, ವಿಧಾನ ಪರಿಷತ್ತಿನಲ್ಲೂ ಸಚಿವರು ಉತ್ತ ನೀಡುವುದಕ್ಕೆ ಹದಿನೈದು, ಇಪ್ಪತ್ತು ದಿನಗಳ ಸಮಯ ಕೋರುತ್ತಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕೊಹ್ಲಿಗಿಂತ ರೋಹಿತ್ ಶರ್ಮಾ ಉತ್ತಮ ಟೆಸ್ಟ್ ನಾಯಕ: ವಾಸಿಂ ಜಾಫರ್

ಹೆತ್ತ ಕಂದಮ್ಮನ್ನು ಜೀವಂತ ಸಮಾಧಿ ಮಾಡಿದ ತಾಯಿ

ಐದು ನಿಮಿಷಗಳ ಚಾರ್ಜ್‌ ನಲ್ಲಿ 650 ಕಿ.ಮೀ. ಓಡಬಲ್ಲದು ಈ ಎಲೆಕ್ಟ್ರಿಕ್ ಕಾರು

ಅಂಗನವಾಡಿ ಕಟ್ಟಡಕ್ಕೆ ಬೆಂಕಿ: ಅದೃಷ್ಟವಶಾತ್​ ಮಕ್ಕಳು ಪ್ರಾಣಾಪಾಯದಿಂದ ಪಾರು

ಉಕ್ರೇನ್ ರಂಗಮಂದಿರದ ಮೇಲೆ ರಷ್ಯಾ ಬಾಂಬ್ ದಾಳಿ: ಮಕ್ಕಳು ಸೇರಿದಂತೆ ಸಾವಿರಾರು ಮಂದಿ ಸಾವು

 

ಇತ್ತೀಚಿನ ಸುದ್ದಿ