ತಂದೆ, ಅಕ್ಕನ ಆತ್ಮಹತ್ಯೆಯ ಬಳಿಕ ತಂಗಿಯೂ ಆತ್ಮಹತ್ಯೆಗೆ ಶರಣು ! | ಏನಿದು ಘಟನೆ - Mahanayaka
12:08 PM Saturday 18 - October 2025

ತಂದೆ, ಅಕ್ಕನ ಆತ್ಮಹತ್ಯೆಯ ಬಳಿಕ ತಂಗಿಯೂ ಆತ್ಮಹತ್ಯೆಗೆ ಶರಣು ! | ಏನಿದು ಘಟನೆ

Kavya
22/06/2021

ಕೋಲಾರ:  ಒಂದೂವರೆ ವರ್ಷದ ಹಿಂದೆ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಾದ ಬಳಿಕ ಅಕ್ಕ ಆತ್ಮಹತ್ಯೆಗೆ ಶರಣಾದಳು. ಇದೀಗ ತಂಗಿಯೂ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಹೌದು..! ಕೋಲಾರದ ಬೆಗ್ಲಿ ಹೊಸಳ್ಳಿಯಲ್ಲಿ ಕುಟುಂಬವೊಂದರಲ್ಲಿ ಒಬ್ಬರ ಹಿಂದೊಬ್ಬರಂತೆ ಆತ್ಮಹತ್ಯೆಗಳು ನಡೆದಿರುವುದು ಜನರನ್ನು ಬೆಚ್ಚಿ ಬೀಳಿಸಿದೆ.


Provided by

ತಾಲ್ಲೂಕಿನ ಬೆಗ್ಲಿ ಹೊಸಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ 23 ವರ್ಷ ವಯಸ್ಸಿನ ಕಾವ್ಯಾ ಅವರು ನಗರದಲ್ಲಿ ಸೋಮವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಇವರ ತಂದೆ, ಮತ್ತು ಅಕ್ಕ ಕೂಡ ಈ ಹಿಂದೆ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ.

ತಾಯಿ ಪುಷ್ಪಲತಾ ಜತೆ ನಗರದ ಕೋಲಾರಮ್ಮ ಬಡಾವಣೆಯಲ್ಲಿ ವಾಸವಾಗಿದ್ದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿದ್ದ ಕಾವ್ಯಾ ಅವರ ತಂದೆ ಒಂದೂವರೆ ವರ್ಷದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಾದ ಬಳಿಕ ಅನುಕಂಪದ ಆಧಾರದಲ್ಲಿ ಕಾವ್ಯಾ ಅವರನ್ನು ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರ ಸಂಜೆ ಕಚೇರಿಯಿಂದ ಮನೆಗೆ ಮರಳಿದ ಕಾವ್ಯಾ ಅವರು ತಾಯಿಯನ್ನು ಬೋಂಡಾ ತರಲು ಅಂಗಡಿಗೆ ಕಳುಹಿಸಿದ್ದರು. ತಾಯಿಯು ಅಂಗಡಿಯಿಂದ ಮನೆಗೆ ಮರಳುವಷ್ಟರಲ್ಲಿ ಕಾವ್ಯಾ ಮನೆಯಲ್ಲಿ ನೇಣು ಹಾಕಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ಗೊತ್ತಿಲ್ಲ. ಕಾವ್ಯಾ ಅವರ ಅಕ್ಕ ಸಹ ಕೆಲ ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ