ತಂದೆಯ ಅಂತಿಮ ದರ್ಶನ ಪಡೆದ ಪುನೀತ್ ಹಿರಿಯ ಪುತ್ರಿ ಧೃತಿ - Mahanayaka

ತಂದೆಯ ಅಂತಿಮ ದರ್ಶನ ಪಡೆದ ಪುನೀತ್ ಹಿರಿಯ ಪುತ್ರಿ ಧೃತಿ

dhruti
30/10/2021

ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅವರ ನಿಧನದ ಹಿನ್ನೆಲೆಯಲ್ಲಿ ಅವರ ಪುತ್ರಿ ಧೃತಿ ವಿದೇಶದಿಂದ ಆಗಮಿಸಿದ್ದು, ತಂದೆಯ ಮೃತದೇಹದ ಎದುರು ಭಾವುಕರಾದ ಅವರು ಏನು ಮಾಡಬೇಕು ಎನ್ನುವುದು ತೋಚದೇ ತಂದೆಯ ತಲೆಯನ್ನು ನೇವರಿಸಿ, ನಮಸ್ಕರಿಸಿದರು.

ತೀವ್ರ ನೋವಿನಿಂದ ತಮ್ಮ ತಾಯಿಯನ್ನು ಅಪ್ಪಿಕೊಂಡು ಕಣ್ಣೀರು ಹಾಕಿದ್ದಾರೆ. ತಂದೆಯ ಪಾರ್ಥಿವ ಶರೀರವನ್ನು ನೋಡುತ್ತಿದ್ದಂತೆಯೇ ಅವರು ತೀವ್ರವಾಗಿ ಭಾವುಕರಾದರು.

ಏರ್‌ ಪೋರ್ಟ್‌ನಿಂದ ನೇರವಾಗಿ ಮನೆಗೆ ಆಗಮಿಸಿದ ದೃತಿ, ಮನೆಯಿಂದ ಕಂಠೀರವ ಕ್ರೀಡಾಂಗಣಕ್ಕೆ ಬಂದಿದ್ದಾರೆ. ನಟ ಪುನೀತ್ ರಾಜ್​ಕುಮಾರ್ ಪುತ್ರಿ ಧೃತಿ ವಿದೇಶದಲ್ಲಿ ವ್ಯಾಸಾಂಗ ನಡೆಸುತ್ತಿದ್ದರು. ತಂದೆಯ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಅವರು ಈಗ ಭಾರತಕ್ಕೆ ವಾಪಾಸಾಗಿದ್ದಾರೆ. 

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ