ತರಕಾರಿ ಮಾರಾಟದ ನೆಪದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕ ಅರೆಸ್ಟ್ - Mahanayaka
11:50 AM Thursday 16 - October 2025

ತರಕಾರಿ ಮಾರಾಟದ ನೆಪದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕ ಅರೆಸ್ಟ್

mahesh jose
25/06/2022

ಕಲ್ಪೆಟ್ಟ: ನಗರದಲ್ಲಿ ತರಕಾರಿ ಮಾರಾಟ ಮಾಡುವ ನೆಪದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನನ್ನು ಅಬಕಾರಿ ತಂಡ ಬಂಧಿಸಿದೆ.


Provided by

ಕಣ್ಣೂರಿನ ತಲಶ್ಶೇರಿಯ ಚಿರಕ್ಕರ ಚಂಪದನ್ ಮನೆ ನಿವಾಸಿ ಮಹೇಶ್ ಅಲಿಯಾಸ್ ಜೋಸ್ ಬಂಧಿತ ಆರೋಪಿಯಾಗಿದ್ದು,  ಈತನ ಮನೆಯಿಂದ 530 ಗ್ರಾಂ ಗಾಂಜಾ ಹಾಗೂ 3 ಸಾವಿರ ರೂ.ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ತರಕಾರಿ ಮಾರುತ್ತಿರುವಂತೆ ನಟಿಸಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ನಶೆ ಏರಿಸುವುದೇ ಈತನ ಪ್ರಮುಖ ಚಟುವಟಿಕೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.  ಆರೋಪಿಯನ್ನು ಎನ್‌ ಡಿಪಿಎಸ್ ಕಾಯ್ದೆಯಡಿ ಕಲ್ಪೆಟ್ಟಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಕಲ್ಪೆಟ್ಟಾ ಅಬಕಾರಿ ಸರ್ಕಲ್ ಇನ್ಸ್ ಪೆಕ್ಟರ್ ವಿ.ಪಿ.ಅನೂಪ್, ಅಬಕಾರಿ ಪ್ರಿವೆಂಟಿವ್ ಆಫೀಸರ್ ಎಂ.ಎ.ರಘು, ಸಿವಿಲ್ ಅಬಕಾರಿ ಅಧಿಕಾರಿಗಳಾದ ಎಂ.ಎ.ಸುನೀಲಕುಮಾರ್, ವಿ.ಕೆ.ವೈಶಾಖ್ ಹಾಗೂ ಸಿ.ಕೆ.  ರಂಜಿತ್ ಹಾಗೂ ಇತರರನ್ನೊಳಗೊಂಡ ತಂಡ ತಪಾಸಣೆಯಲ್ಲಿ ಭಾಗವಹಿಸಿತ್ತು.

ತಿಂಗಳ ಹಿಂದೆ ತರಕಾರಿ ಗಾಡಿಯಲ್ಲಿ ಹಾನ್ಸ್ ಸೇರಿದಂತೆ ಡ್ರಗ್ಸ್ ಸಾಗಾಟ ಮಾಡುತ್ತಿದ್ದಾಗ ಮುತ್ತಂಗ ಚೆಕ್ ಪೋಸ್ಟ್ ನಲ್ಲಿ ಯುವಕರು ಸಿಕ್ಕಿಬಿದ್ದಿದ್ದರು. ಇದೇ ರೀತಿ  ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಗೋಣಿ ಚೀಲಗಳಲ್ಲಿ ತರಕಾರಿ ಸಾಗಿಟ ಮಾಡುವ ನೆಪದಲ್ಲಿ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿತ್ತು.

ದೊಡ್ಡ ಲಾರಿಗಳು ತರಕಾರಿ ಮುಂತಾದ ಲೋಡ್ ಗಳೊಂದಿಗೆ ಹಾನ್ಸ್ ಸೇರಿದಂತೆ ಅಮಲು ಪದಾರ್ಥಗಳನ್ನು ಸಾಗಾಟ ಮಾಡುತ್ತಿದ್ದು, ಮುತ್ತಂಗ ಅಬಕಾರಿ ಚೆಕ್ ಪೋಸ್ಟ್ ನಲ್ಲಿ ದೊಡ್ಡ ವಾಹನಗಳ ಸರಿಯಾದ ತಪಾಸಣೆ ನಡೆಯುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಇಡಿ ಮುಂದೆ ಹಾಜರಾಗಲು ರಾಹುಲ್ ಗಾಂಧಿ ನಾಟಕ ಆಡುತ್ತಿದ್ದಾರೆ: ಅಮಿತ್ ಶಾ

ಮದುವೆ ಸಂಭ್ರಮದಲ್ಲಿ ಗುಂಡು ಹಾರಿಸಿದ ವರ: ಅತಿಥಿ ಸಾವು

ಭಾರೀ ಪ್ರವಾಹಕ್ಕೆ ಸಿಲುಕಿ 40 ಮಂದಿ ಸಾವು: ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ

ಸ್ಕೂಟರ್ ಶೋ ರೂಮ್‌ ನಲ್ಲಿ ಅಗ್ನಿ ಅವಘಡ: ಲಕ್ಷಾಂತರ ರೂ. ಮೌಲ್ಯದ ಬೈಕ್ ಬೆಂಕಿಗಾಹುತಿ

ಪತಿಗೆ ಪರಸ್ತ್ರಿ ಸಹವಾಸ: ಪತಿ-ಮಹಿಳೆಯ ಬೆತ್ತಲೆ ಮೆರವಣಿಗೆ ನಡೆಸಿದ ಪತ್ನಿ

ಇತ್ತೀಚಿನ ಸುದ್ದಿ