ತಾಯಿಯ ಕಣ್ಣೆದುರೇ ರೈಲಿನಡಿಗೆ ಬಿದ್ದ ವಿದ್ಯಾರ್ಥಿನಿ! - Mahanayaka

ತಾಯಿಯ ಕಣ್ಣೆದುರೇ ರೈಲಿನಡಿಗೆ ಬಿದ್ದ ವಿದ್ಯಾರ್ಥಿನಿ!

kerala
24/07/2022

ಕಣ್ಣೂರು:  ರೈಲ್ವೇ ಗೇಟ್ ದಾಟುವ ವೇಳೆ ರೈಲಿಗೆ ಡಿಕ್ಕಿ ಹೊಡೆದು ಪ್ರಥಮ ಪಿಯುಸಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಕೇರಳದ ಕಣ್ಣೂರಿನ ಚಿರಕ್ಕಲ್ ಅರ್ಪಮ್‌ತೋಡ್ ರೈಲ್ವೆ ಗೇಟ್ ಬಳಿ ನಡೆದಿದೆ.

ಅಲವಿಯ ನಿಚುವಯಲ್ ನಿವಾಸಿ  ನಂದಿತಾ ಪಿ. ಕಿಶೋರ್ (16) ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದು, ಈಕೆ ಕಕ್ಕಾಡ್ ಭಾರತೀಯ ವಿದ್ಯಾಭವನ ಶಾಲೆಯ 11ನೇ ತರಗತಿ ವಿದ್ಯಾರ್ಥಿನಿ ಎಂದು ತಿಳಿದು ಬಂದಿದೆ.

ತಾಯಿಯೊಂದಿಗೆ ಕಾರಿನಲ್ಲಿ ಬಂದಿದ್ದ ವಿದ್ಯಾರ್ಥಿನಿ ಕಾರಿನಿಂದ ಇಳಿದು ರೈಲನ್ನು ಗಮನಿಸದೇ ಹಳಿದಾಟಿದ್ದು, ಈ ವೇಳೆ ಏಕಾಏಕಿ ಬಂದ ರೈಲು ವಿದ್ಯಾರ್ಥಿನಿಗೆ ಡಿಕ್ಕಿ ಹೊಡೆದಿದೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆ ಅದಾಗಲೇ ಮೃತಪಟ್ಟಿದ್ದಳು ಎನ್ನಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ