ತಾಯಿಯ ಅಂತ್ಯಸಂಸ್ಕಾರಕ್ಕೆ ಬಂದ ಮಗನೂ ಸಾವು | ಮಾಜಿ ಶಾಸಕರ ಮನೆಯಲ್ಲಿ ಆವರಿಸಿದ ಮೌನ - Mahanayaka
1:22 PM Wednesday 10 - December 2025

ತಾಯಿಯ ಅಂತ್ಯಸಂಸ್ಕಾರಕ್ಕೆ ಬಂದ ಮಗನೂ ಸಾವು | ಮಾಜಿ ಶಾಸಕರ ಮನೆಯಲ್ಲಿ ಆವರಿಸಿದ ಮೌನ

sarojamma suresh kumar
15/05/2021

ಚಾಮರಾಜನಗರ: ಕೊರೊನಾಗೆ ಬಲಿಯಾದ ತಾಯಿಯ ಅಂತ್ಯಸಂಸ್ಕಾರಕ್ಕೆ ಬಂದ ಮಗನೂ ಹೃದಯಾಘಾತದಿಂದ ಮೃತಪಟ್ಟಿರುವ ದಾರುಣ ಘಟನೆ ಚಾಮರಾಜನಗರ ತಾಲೂಕಿನ ಹುರುಳಿನಂಜನಪುರ ಗ್ರಾಮದಲ್ಲಿ ನಡೆದಿದೆ.

ಕೊಳ್ಳೇಗಾಲದ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಅವರ ಅತ್ತೆ 76 ವರ್ಷ ವಯಸ್ಸಿನ ಸರೋಜಮ್ಮ ಶುಕ್ರವಾರ ರಾತ್ರಿ ಕೊರೊನಾದಿಂದ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅವರ ಪುತ್ರ 53 ವರ್ಷ ವಯಸ್ಸಿನ ಸುರೇಶ್ ಕುಮಾರ್ ಅಂತ್ಯಕ್ರಿಯೆಗೆ ಆಗಮಿಸಿದ್ದರು. ಅಂತ್ಯ ಸಂಸ್ಕಾರಕ್ಕೆ ತೆರಳುತ್ತಿದ್ದ ವೇಳೆ, ಅಂತ್ಯ ಸಂಸ್ಕಾರ ನಡೆಸುತ್ತಿದ್ದ ಜಾಗದಿಂದ ಸ್ವಲ್ಪ ದೂರದಲ್ಲೇ ಅವರು ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಸದ್ಯ ಮಾಜಿ ಶಾಸಕರ ಮನೆಯಲ್ಲಿ ಶೋಕ ಮನೆ ಮಾಡಿದ್ದು, ತಾಯಿ ಮತ್ತು ಮಗ ಇಬ್ಬರೂ ಒಂದೇ ದಿನ ಬಲಿಯಾಗಿದ್ದು, ಕುಟುಂಬಸ್ಥರ ಮನೆಯಲ್ಲಿ ಮೌನ ಆವರಿಸಿದೆ.

ಇತ್ತೀಚಿನ ಸುದ್ದಿ