ನಟಿ ಲೀಲಾವತಿ ನಿಧನದ ಬೆನ್ನಲ್ಲೇ ಅವರನ್ನು ನೋಡಿಕೊಳ್ಳುತ್ತಿದ್ದ ಬಂಗಾರಮ್ಮ ನಿಧನ - Mahanayaka
12:20 PM Sunday 14 - September 2025

ನಟಿ ಲೀಲಾವತಿ ನಿಧನದ ಬೆನ್ನಲ್ಲೇ ಅವರನ್ನು ನೋಡಿಕೊಳ್ಳುತ್ತಿದ್ದ ಬಂಗಾರಮ್ಮ ನಿಧನ

leelavathi
14/12/2023

ಇತ್ತೀಚೆಗೆ ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರು ನಿಧನರಾಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಲೀಲಾವತಿ ಅವರನ್ನು ನೋಡಿಕೊಳ್ಳುತ್ತಿದ್ದ ಮಹಿಳೆ ಬಂಗಾರಮ್ಮ ಅವರೂ ನಿಧನರಾಗಿದ್ದಾರೆ.


Provided by

ಬಂಗಾರಮ್ಮನವರಿಗೆ 65 ವರ್ಷ ವಯಸ್ಸಾಗಿತ್ತು. ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಕಳೆದ ಕೆಲವು ದಿನಗಳ ಹಿಂದೆ ತೀವ್ರ ಅನಾರೋಗ್ಯದ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮಂಗಳವಾರ ಅವರು ಕೊನೆಯುಸಿರೆಳೆದಿದ್ದಾರೆ.

ಬಂಗಾರಮ್ಮನವರು ಲೀಲಾವತಿ ಅವರ ಜೊತೆಗೆ ಸದಾ ಇರುತ್ತಿದ್ದರು. ಅವರು ಎಲ್ಲೇ ಹೋದರೂ ಬಂಗಾರಮ್ಮ ಜೊತೆಗೆ ತೆರಳುತ್ತಿದ್ದರು. ಬಂಗಾರಮ್ಮ ಅನಾರೋಗ್ಯದಿಂದ ಬಳಲುತ್ತಿದ್ದರಿಂದಾಗಿ ಅವರನ್ನು ನೋಡಿಕೊಳ್ಳಲು ನರ್ಸ್ ವೊಬ್ಬರನ್ನು ವಿನೋದ್ ರಾಜ್ ನೇಮಿಸಿದ್ದರು.

ಇತ್ತೀಚಿನ ಸುದ್ದಿ