ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒಪ್ಪದ ಗೆಳೆಯನ ಬರ್ಬರ ಹತ್ಯೆ! - Mahanayaka
1:39 PM Thursday 20 - November 2025

ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒಪ್ಪದ ಗೆಳೆಯನ ಬರ್ಬರ ಹತ್ಯೆ!

death 1
30/01/2024

ನವದೆಹಲಿ: ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒಪ್ಪದ ಗೆಳೆಯನನ್ನು ಬರ್ಬರವಾಗಿ ಹತ್ಯೆ ಮಾಡಿರುವ ವಿಲಕ್ಷಣ ಘಟನೆಯೊಂದು ದೆಹಲಿಯ ಡಿಡಿಎ ಪಾರ್ಕ್ ಮೋರಿ ಗೇಟ್ ಬಳಿ ನಡೆದಿದೆ.

ಉತ್ತರ ಪ್ರದೇಶದ ಜಲೋನ್ ಜಿಲ್ಲೆಯ ರುದೂರ್ಪುರ ಗ್ರಾಮದ ನಿವಾಸಿ ಪ್ರಮೋದ್ ಕುಮಾರ್ ಶುಕ್ಲಾ(20) ತನ್ನ ಸ್ನೇಹಿತನಿಂದಲೇ ಹತ್ಯೆಗೀಡಾದ ಯುವಕನಾಗಿದ್ದಾನೆ. ಈತನ ಸ್ನೇಹಿತ ರಾಜೇಶ್ ಎಂಬಾತ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ.

ಪ್ರಮೋದ್ ಕುಮಾರ್ ಖೋಯಾ ಮಂಡಿಯಲ್ಲಿ ಕೆಲಸ ಮಾಡುತ್ತಿದ್ದ. ಆರೋಪಿ ರಾಜೇಶ್ ಖೋಯಾ ಮಂಡಿ ಬಳಿಯ ಮೋರಿ ಗೇಟ್ ನಲ್ಲಿರುವ ರೈನ್ ಬಸೇರಾದಲ್ಲಿ ಮೃತ ಪ್ರಮೋದ್ ಜೊತೆಗೆ ವಾಸಿಸುತ್ತಿದ್ದ.
ಡಿಡಿಎ ಪಾರ್ಕ್ನಲ್ಲಿ ಪ್ರಮೋದ್ ನ ಮೃತದೇಹ ಪತ್ತೆಯಾಗಿತ್ತು. ಮುಖವನ್ನು ಜಜ್ಜಿ ಗುರುತು ಸಿಗದಂತೆ ಮಾಡಲಾಗಿತ್ತು. ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಪರಿಶೀಲನೆ ನಡೆಸಿದ್ದರು. ತನಿಖೆ ವೇಳೆ ಪ್ರಮೋದ್ ಜೊತೆಗೆ ರಾಜೇಶ್ ಇದ್ದಿರುವುದು ಬೆಳಕಿಗೆ ಬಂದಿದೆ.

ಈ ಮಾಹಿತಿಯ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿ ರಾಜೇಶ್ ನನ್ನು ಪತ್ತೆ ಹಚ್ಚಲಾಗಿತ್ತು. ಪೊಲೀಸರ ವಿಚಾರಣೆ ವೇಳೆ ಆರೋಪಿ ಕೊಲೆಯ ರಹಸ್ಯ ಬಾಯ್ಬಿಟ್ಟಿದ್ದಾನೆ.ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒಪ್ಪದ ಪ್ರಮೋದ್ ಜೊತೆಗೆ ಜಗಳವಾಡಿದ್ದ ರಾಜೇಶ್ ಕೋಪದಿಂದ ಪ್ರಮೋದ್ ನನ್ನು ಹತ್ಯೆ ಮಾಡಿದ್ದಾನೆ. ಬಳಿಕ ಆತನಲ್ಲಿದ್ದ 18,500 ರೂಪಾಯಿ ಹಾಗೂ ಮೊಬೈಲ್ ದೋಚಿ ಸ್ಥಳದಿಂದ ಪರಾರಿಯಾಗಿದ್ದ.

 

ಇತ್ತೀಚಿನ ಸುದ್ದಿ