ತಾಯಿಯ ಸಲಿಂಗ ಕಾಮವನ್ನು ಆಕಸ್ಮಿಕವಾಗಿ ನೋಡಿದ ಮಗನ ಬರ್ಬರ ಹತ್ಯೆ!
ಕೋಲ್ಕತ್ತಾ: ಸಲಿಂಗ ಕಾಮದಲ್ಲಿ ತೊಡಗಿದ್ದ ವೇಳೆ ಪುತ್ರನ ಕಣ್ಣಿಗೆ ಬಿದ್ದ ಮಹಿಳೆಯೊಬ್ಬಳು, ತನ್ನ ಸಂಬಂಧವನ್ನು ಮುಚ್ಚಿಡಲು ಮಗನನ್ನು ಭೀಕರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ಹೂಗ್ಲಿ ಕೊನ್ನಾಗರ್ ಪ್ರದೇಶದಲ್ಲಿ ನಡೆದಿದೆ.
ಕೊನ್ನಾಗರ್ ಪ್ರದೇಶದ ನಿವಾಸಿಯಾಗಿರುವ ಶಾಂತ ಶರ್ಮಾಗೆ ಮದುವೆಗೂ ಮೊದಲೇ ಇಶ್ರತ್ ಫರ್ವೀನ್ ಎಂಬಾಕೆಯೊಂದಿಗೆ ಸಲಿಂಗ ಲೈಂಗಿಕ ಸಂಬಂಧ ಇತ್ತು ಎನ್ನಲಾಗಿದೆ. ಮದುವೆಯ ನಂತರ ಕೂಡ ಈ ಸಂಬಂಧ ಮುಂದುವರಿದಿತ್ತು. ಇವರಿಬ್ಬರ ಸಲಿಂಗ ಕಾಮದ ವಿಚಾರ ಆಕೆಯ ಪತಿಗೂ ಗೊತ್ತಿತ್ತು. ಆದರೆ ಆತ ಆ ಸಂಬಂಧವನ್ನು ವಿರೋಧಿಸಿರಲಿಲ್ಲ. ಹೀಗಾಗಿ ಅವರ ಲೈಂಗಿಕ ಸಂಬಂಧ ಮುಂದುವರಿದಿತ್ತು.
ತಾಯಿ ಹಾಗೂ ಆಕೆಯ ಗೆಳತಿ ಸಲಿಂಗ ಕಾಮದಲ್ಲಿ ತೊಡಗಿರುವುದನ್ನು ಪುತ್ರ ಶ್ರೇಯಾಂಶು ಶರ್ಮಾ ಆಕಸ್ಮಿಕವಾಗಿ ನೋಡಿದ್ದ. ಇವರ ಸಂಬಂಧವನ್ನು ನೋಡಿದ್ದರಿಂದ ಆತ ಬಹಳ ವಿಚಿತ್ರವಾಗಿ ವರ್ತಿಸಲು ಆರಂಭಿಸಿದ್ದ. ಮಗನ ಮಾನಸಿಕ ಸ್ಥಿತಿ ಬದಲಾಗಿರೋದು ಶಾಂತ ಶರ್ಮಾಳಿಗೆ ತಲೆನೋವಾಗಿ ಪರಿಣಮಿಸಿತ್ತು. ಹೊರಸಮಾಜದಲ್ಲಿ ಸಂಭಾವಿತರಂತೆ ಬದುಕಿರುವ ಶಾಂತ ಶರ್ಮಳಿಗೆ ತನ್ನ ಸಲಿಂಗ ಕಾಮದ ವಿಚಾರ ಹೊರಗಡೆ ಮಗ ಹೇಳಿ ಬಿಟ್ಟರೆ, ತನ್ನ ಮಾನ ಮರ್ಯಾದೆ ಉಳಿಸಿಕೊಳ್ಳುವುದು ಹೇಗೆ ಎನ್ನುವ ಚಿಂತೆಯಾಗಿತ್ತು.
ಹೋಗಾಗಿ ತನ್ನ ಸಲಿಂಗ ಕಾಮಿ ಸಂಗಾತಿ ಇಶ್ರತ್ ಫರ್ವೀನ್ ಜೊತೆಗೂಡಿ, ಮಗನ ತಲೆಗೆ ಹಲವು ಬಾರಿ ಹೊಡೆದು ಹತ್ಯೆ ಮಾಡಿ, ತಲೆಯನ್ನು ಜಜ್ಜಿ ಹಾಕಿ ಬೇರ್ಪಡಿಸಿದ್ದು, ಕೈಗಳನ್ನು ಕತ್ತರಿಸಲಾಗಿತ್ತು.
ಈ ಕೊಲೆ ಪ್ರಕರಣದ ತನಿಖೆ ನಡೆಸಿದ ಪೊಲೀಸರು, ವಿಧಿ ವಿಜ್ಞಾನ ತಜ್ಞರ ಸಹಾಯದೊಂದಿಗೆ ಸಲಿಂಗ ಕಾಮಿಗಳಾದ ಶಾಂತ ಶರ್ಮಾ, ಇಶ್ರತ್ ಫರ್ವೀನ್ ಇವರನ್ನು ಬಂಧಿಸಿದ್ದಾರೆ.




























