ಜಾತಿ ಜನಗಣತಿ, ಜನಗಣತಿ ಮಾಡೋ ಸಂವಿಧಾನ ಬದ್ಧ ಅಧಿಕಾರ ಇರೋದು ಕೇಂದ್ರಕ್ಕೆ: ಸಿ.ಟಿ.ರವಿ

ಚಿಕ್ಕಮಗಳೂರು: ಜಾತಿ ಜನಗಣತಿ, ಜನಗಣತಿ ಮಾಡೋ ಅಧಿಕಾರ ಸಂವಿಧಾನ ಬದ್ಧವಾಗಿ ಕೇಂದ್ರಕ್ಕೆ ಮಾತ್ರ ಇರೋದು ಅಂತ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಜಾತಿ ಜನಗಣತಿ ವರದಿ ಹಿನ್ನೆಲೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿ, ಜನಗಣತಿ ಮಾಡೋ ಅಧಿಕಾರ ಸಂವಿಧಾನ ಬದ್ಧವಾಗಿ ಕೇಂದ್ರಕ್ಕೆ ಮಾತ್ರ ಇರೋದು, ಇವ್ರು ಸಾಮಾಜಿಕ–ಆರ್ಥಿಕ ಸಮಿಕ್ಷೆ ಅಂತ ಹೇಳಿದ್ದಾರೆ. ಅಧಿಕೃತವಾಗಿ ಬಿಡುಗಡೆಯಾಗಿಲ್ಲ, ಈಗ್ಲೆ ಸತ್ಯ–ಸುಳ್ಳು ಪ್ರತಿಕ್ರಿಯೆ ಕಷ್ಟ ಎಂದಿದ್ದಾರೆ.
ಅನಧಿಕೃತವಾಗಿ ಸೋರಿಕೆಯಾಗಿರೋದನ್ನ ಸತ್ಯ ಅಂತ ಭಾವಿಸಿದ್ರೆ ಚರ್ಚೆ ಹುಟ್ಟಾಕುತ್ತೆ, Who are minorities, ಅಲ್ಪ ಸಂಖ್ಯಾತರು ಯಾರು…? ರಾಜ್ಯದ ಜನಸಂಖ್ಯೆಯಲ್ಲಿ 2ನೇ ದೊಡ್ಡ ಸಂಖ್ಯೆಯಲ್ಲಿರೋರು ಅಲ್ಪ ಸಂಖ್ಯಾತರಾಗುತ್ತಾರಾ…? ಮೀಸಲಾತಿ ಸಂಬಂಧ ಕೋರ್ಟಿನಲ್ಲಿ ಮೊಕ್ಕದ್ದಮೆ ಇದ್ದಾಗ ಕೇಂದ್ರ ಮೀಸಲಾತಿ ಪರ ಪ್ರಮಾಣಪತ್ರ ಸಲ್ಲಿಸ್ತು, ಬಡ್ತಿ ಮೀಸಲಾತಿ ಪರ ಪ್ರಮಾಣ ಪತ್ರ ಸಲ್ಲಿಸ್ತು, ಇದು ಮೀಸಲಾತಿ ಬಗ್ಗೆ ಬಿಜೆಪಿಗೆ ಇರುವ ಬದ್ಧತೆ ಎಂದರು.
ಸಮಾಜ ಒಡೆಯುವ ದುರುದ್ದೇಶವನ್ನ ನಾವು ಬೆಂಬಲಿಸೋಲ್ಲ, ಕೆಲ ವ್ಯಕ್ತಿ–ಸಂಘಟನೆ–ರಾಜಕೀಯ ಪಕ್ಷಗಳು ಹಿಂದೂ ಸಮಾಜವನ್ನ ಜಾತಿವಾರು ಒಡೆಯುತ್ತಿವೆ, ಮುಸ್ಲಿಂನಲ್ಲೂ 56 ಜಾತಿಗಳಿವೆ, ಮುಟ್ಟಿಸಿಕೊಳ್ಳದ Untouchable ಕೂಡ ಇದ್ದಾರೆ, ಅವರ ಬಗ್ಗೆ ಚರ್ಚೆ ಇಲ್ಲ ಎಂದರು.
ಪಸ್ಮಾಂಡ ಮುಸ್ಲಿಂ ಇದ್ದಾರೆ, ಯಾರು ಪ್ರವಾದಿ ವಂಶಸ್ಥರು ಅಂತ ಭಾವಿಸುತ್ತಾರೆ ಅವರು ಹೆಣ್ಣು ಕೊಡಲ್ಲ–ಹೆಣ್ಣು ತರಲ್ಲ. ಮುಸ್ಲಿಮರನ್ನ ಹಿಡಿಯಾಗಿ, ಹಿಂದೂಗಳನ್ನ ಒಡೆದು ಆಳುವ ನೀತಿಗೆ ನಾವು ಬೆಂಬಲವಿಲ್ಲ, ಸಾಮಾಜಿಕ ನ್ಯಾಯ ಬಿಜೆಪಿ ಬದ್ಧತೆ, ಅದಕ್ಕೆ ನಾವು ಬದ್ಧ ಎಂದು ಅವರು ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD