ತರಕಾರಿಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಕಂಗಾಲು!

ಬೆಂಗಳೂರು: ತರಕಾರಿ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ತರಕಾರಿ ಕೊಂಡುಕೊಳ್ಳುವುದಕ್ಕಿಂತ ಮಾಂಸವೇ ಬೆಟರ್ ಅಂತ ಗ್ರಾಹಕರು ಹೇಳುತ್ತಿದ್ದಾರೆ. ಬಿಸಿಲು, ಮುಂಗಾರುಪೂರ್ವ ಮಳೆಯ ಪರಿಣಾಮ ಸಗಟು ಮಾರುಕಟ್ಟೆಗೆ ತರಕಾರಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಹೀಗಾಗಿ ದೀರ್ಘಾವಧಿಗೆ ತರಕಾರಿ ದರ ಹೆಚ್ಚಳವಾಗಿದೆ.
ದಿನಬಳಕೆ ಮಾತ್ರವಲ್ಲದೆ, ಮದುವೆ, ಗೃಹಪ್ರವೇಶದಂತಹ ಕಾರ್ಯಕ್ರಮಗಳ ಖರ್ಚು ವೆಚ್ಚವನ್ನು ಹೆಚ್ಚಳ ಮಾಡಲಾಗಿದೆ. ಹೋಟೆಲ್, ಕೇಟರಿಂಗ್ ಗಳ ಮೇಲೆಯೂ ತರಕಾರಿ ದರ ಹೆಚ್ಚಳ ಪರಿಣಾಮ ಬೀರಿದೆ.
ಬೀನ್ಸ್ ದರ ಕೆಜಿಗೆ 250 ರೂ., ಕ್ಯಾರೆಟ್ 100 ರೂ., ಕ್ಯಾಪ್ಸಿಕಂ 90 ರೂ., ಬದನೆಕಾಯಿ 85 ರೂ. ವರೆಗೆ ಮಾರಾಟವಾಗುತ್ತಿದ್ದು, ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ.
ಬೆಂಗಳೂರಿನ ಪ್ರಮುಖ ಸಗಟು ಮಾರುಕಟ್ಟೆಗಳಾದ ಕೆಆರ್ ಮಾರುಕಟ್ಟೆ, ಯಶವಂತಪುರ, ಬಿನ್ನಿ ಮಿಲ್, ಕಲಾಸಿಪಾಳ್ಯ ಮೊದಲಾದ ತರಕಾರಿ ಮಾರುಕಟ್ಟೆಗಳಿಗೆ ಬರುವ ತರಕಾರಿ ಪ್ರಮಾಣದಲ್ಲಿ ಭಾರಿ ಇಳಿಕೆಯಾಗಿದೆ. ಕಳೆದ ವಾರ ಸುರಿದ ಮಳೆಗೆ ತರಕಾರಿಗಳು ಹಾನಿಯಾಗಿದ್ದು, ಬೆಲೆ ಏರಿಕೆ ಮುಂದುವರೆದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97
ಫೇಸ್ ಬುಕ್ ಪೇಜ್ ಫಾಲೋ ಮಾಡಿ: https://www.facebook.com/profile.php?id=61556202767068