ನಿಲ್ಲದ ಕಾಡಾನೆ ಉಪಟಳದಿಂದ ಜನಸಾಮಾನ್ಯರು ಕಂಗಾಲು!

ಚಿಕ್ಕಮಗಳೂರು: ಕಾಫಿನಾಡಲ್ಲಿ ನಿಲ್ಲದ ಕಾಡಾನೆ ಉಪಟಳ—ಭೀತಿ ಮುಂದುವರಿದಿದೆ, ಕಾಫಿತೋಟ–ಗ್ರಾಮ–ರಾಜ್ಯ ಹೆದ್ದಾರಿಯಲ್ಲೂ ಕಾಡಾನೆಗಳ ಉಪಟಳದಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ.
ಕಾಫಿತೋಟದಲ್ಲಿ ಕಾಡಾನೆ ರೌಂಡ್ಸ್ ನಿಂದ ಕಾಫಿ ತೋಟಗಳು ಧ್ವಂಸವಾಗ್ತಿವೆ, ಮೂಡಿಗೆರೆ ತಾಲೂಕಿನ ಕುನ್ನಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಧರ್ಮಪಾಲ್, ರವೀಂದ್ರ, ಶ್ರೀಕಾಂತ್ ಹಾಗೂ ರವಿ ಎಂಬುವರ ತೋಟ ನಾಶವಾಗಿದೆ.
ಕುನ್ನಳ್ಳಿ ಗ್ರಾಮದಲ್ಲಿ ಕಾಡಾನೆ ವ್ಯಕ್ತಿ ಮೇಲೆ ದಾಳಿ ನಡೆಸಿತ್ತು. ತೋಟ–ಗ್ರಾಮಗಳಲ್ಲಿ ಕಾಡಾನೆ ಓಡಾಟದಿಂದ ಸ್ಥಳೀಯರಲ್ಲಿ ಅತಂಕ ಸೃಷ್ಟಿಯಾಗಿದೆ. ಹೀಗಾಗಿ ಅರಣ್ಯ ಇಲಾಖೆಯ ವಿರುದ್ದ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಡಾನೆ ಸ್ಥಳಾಂತರ, ಓಡಿಸಲು ಅನುಮತಿ ಇಲ್ಲ ಅಂತಿರೋ ಆರೋಪ ಕೇಳಿ ಬಂದಿದ್ದು, ಇತ್ತ ಗ್ರಾಮಸ್ಥರು, ಸಾರ್ವಜನಿಕರು ಕಾಡಾನೆ ಉಪಟಳದಿಂದ ಮುಕ್ತಿಯೇ ಇಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಈ ಘಟನೆ ನಡೆದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD